ಕರಾವಳಿ

ರಾಜ್ಯದಲ್ಲಿ 7,925 ಪೊಲೀಸ್ ಹುದ್ದೆಗಳ ನೇಮಕಾತಿ: ಕೆಇಎ ಮುಖಾಂತರ ಪಾರದರ್ಶಕ ಪ್ರಕ್ರಿಯೆ – ಗೃಹ ಸಚಿವ

(ನ್ಯೂಸ್‌ ಕಡಬ) newskadaba.com, ಜು.03 ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 2026-27ನೇ ಸಾಲಿನಲ್ಲಿ ಒಟ್ಟು 7,925 ಪೊಲೀಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಈ ಇಡೀ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಖಾಂತರ ಅತ್ಯಂತ ಪಾರದರ್ಶಕವಾಗಿ ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ನೇಮಕಾತಿಯು ಡಿಟೆಕ್ಟಿವ್ ಸಬ್‌-ಇನ್‌ಸ್ಪೆಕ್ಟರ್, ನಾಗರಿಕ ಮತ್ತು ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್, ಹಾಗೂ ವಿಶೇಷ ಮೀಸಲು ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳನ್ನು ಒಳಗೊಂಡಿದೆ.ಒಟ್ಟು […]

ರಾಜ್ಯದಲ್ಲಿ 7,925 ಪೊಲೀಸ್ ಹುದ್ದೆಗಳ ನೇಮಕಾತಿ: ಕೆಇಎ ಮುಖಾಂತರ ಪಾರದರ್ಶಕ ಪ್ರಕ್ರಿಯೆ – ಗೃಹ ಸಚಿವ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಳ್ಯ: ಜುಲೈ 7ರಂದು ಸಾವಯವ ಗೊಬ್ಬರ ಹರಾಜು ಪ್ರಕ್ರಿಯೆ

(ನ್ಯೂಸ್ ಕಡಬ) newskadaba.com ಜು. 03. ಕೃಷಿ ಇಲಾಖೆಯ ವಶದಲ್ಲಿರುವ ʻʻಸಮೃದ್ದಿ ಸಂಪೂರ್ಣ ಸಾವಯವ ಗೊಬ್ಬರ” ಎಂಬ ಹೆಸರಿನ ಸಾವಯವ ಗೊಬ್ಬರದ ಹರಾಜು ಪ್ರಕ್ರಿಯೆಯನ್ನು ಜುಲೈ 7ರಂದು ಬೆಳಿಗ್ಗೆ 11.30 ಗಂಟೆಗೆ ಸುಳ್ಯ ಪ್ರೈಮರಿ ಅಗ್ರಿಕಲ್ಚರಲ್ ಕ್ರೆಡಿಟ್ ಕೊ- ಆಪರೇಟಿವ್ ಸೊಸೈಟಿಯಲ್ಲಿ ನಡೆಸಲಾಗುತ್ತದೆ. ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವವರು ಅಧಿಕೃತವಾಗಿ ರಸಗೊಬ್ಬರ ಪರವಾನಿಗೆ ಹೊಂದಿರುವ ಮಾರಾಟಗಾರರು ಹಾಜರಾಗಬೇಕು. ರಸಗೊಬ್ಬರಗಳನ್ನು ಇರುವ ಸ್ಥಿತಿಯಲ್ಲಿಯೇ ಹರಾಜು ಮಾಡಲಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಳ್ಯ: ಜುಲೈ 7ರಂದು ಸಾವಯವ ಗೊಬ್ಬರ ಹರಾಜು ಪ್ರಕ್ರಿಯೆ Read More »

ಕರಾವಳಿ

ಹಿಂದುಳಿದ ವರ್ಗಗಳ ಹಾಸ್ಟೆಲ್ ಪ್ರವೇಶ: ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 03. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ (ಸಾಮಾನ್ಯ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ./ಪ.ವರ್ಗದ ಸಾಮಾನ್ಯ ಪದವಿ ಕೋರ್ಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ 2026-27ನೇ ಸಾಲಿಗೆ ಆನ್‍ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ – ಪ್ರವರ್ಗ-1,

ಹಿಂದುಳಿದ ವರ್ಗಗಳ ಹಾಸ್ಟೆಲ್ ಪ್ರವೇಶ: ಅರ್ಜಿ ಆಹ್ವಾನ Read More »

ಕರಾವಳಿ

ಅತಿಥಿ ಉಪನ್ಯಾಸಕರ ಹುದ್ದೆ: ಜುಲೈ 7ರಿಂದ ಸಂದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 03. 2026-27ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಿಗೆ ಅಗತ್ಯವಿರುವ ಪದವಿ ಮಟ್ಟದ (Uಉ) ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂದರ್ಶನವು ಕೊಣಾಜೆ ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಸಿಂಡಿಕೇಟು ಸಭಾಂಗಣದಲ್ಲಿ ಜುಲೈ 7, 8 ಮತ್ತು 9 ರಂದು ನಡೆಯಲಿದೆ. ವಿಷಯವಾರು ಸಂದರ್ಶನದ ವಿವರ: ಜುಲೈ 7 ರಂದು ಇಂಗ್ಲಿಷ್–  ಬೆಳಿಗ್ಗೆ 10:30 ರಿಂದ 11:30, ಕನ್ನಡ -11:30 ರಿಂದ 12:30, ಹಿಂದಿ- 12:30 ರಿಂದ

ಅತಿಥಿ ಉಪನ್ಯಾಸಕರ ಹುದ್ದೆ: ಜುಲೈ 7ರಿಂದ ಸಂದರ್ಶನ Read More »

ಕರಾವಳಿ

ಹೈಕೋರ್ಟ್‌ ಕೊರಡು ಆದೇಶ: ಬಿಜೆಪಿ ಮುಖಂಡನ ಪುತ್ರನ ಕ್ರಿಮಿನಲ್ ಪ್ರಕರಣಕ್ಕೆ ಮಧ್ಯಂತರ ತಡೆ

(ನ್ಯೂಸ್‌ ಕಡಬ) newskadaba.com, ಜು.03 : ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭಿಣಿ ಮಾಡಿದ ಆರೋಪ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಬಿಜೆಪಿ ಮುಖಂಡ ಪಿ.ಜಿ. ಜಗನ್ನಿವಾಸ ರಾವ್ ಅವರ ಪುತ್ರ, ಎಂಜಿನಿಯರಿಂಗ್ ವಿದ್ಯಾರ್ಥಿ ಕೃಷ್ಣ ಜೆ. ರಾವ್ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಸಂತ್ರಸ್ತೆ ಹಾಗೂ ಮಗುವಿನ ಅಗತ್ಯತೆಗಳನ್ನು ಪೂರೈಸಲು ಪ್ರತಿ ತಿಂಗಳು 75 ಸಾವಿರ ರೂಪಾಯಿ ಜೀವನಾಂಶ ಪಾವತಿಸಬೇಕು ಎಂಬ ಷರತ್ತಿನ ಮೇರೆಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ

ಹೈಕೋರ್ಟ್‌ ಕೊರಡು ಆದೇಶ: ಬಿಜೆಪಿ ಮುಖಂಡನ ಪುತ್ರನ ಕ್ರಿಮಿನಲ್ ಪ್ರಕರಣಕ್ಕೆ ಮಧ್ಯಂತರ ತಡೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.02 ಲಕ್ಷ ಎಸ್.ಐ.ಆರ್ ನಮೂನೆ ಹಂಚಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 03. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಯು ಪ್ರಗತಿಯಲ್ಲಿದ್ದು, ಜುಲೈ 29 ರವರೆಗೆ ಬಿ.ಎಲ್.ಒ.ಗಳು ಮನೆ ಮನೆ ಭೇಟಿ ಮಾಡಿ ಮತದಾರರಿಗೆ ಎನ್ಯುಮರೇಷನ್ ಫಾರ್ಮ್‍ ಗಳ ಹಂಚಿಕೆ ಮತ್ತು ಡಿಜಿಟಲೀಕರಣ (Digitization) ಮಾಡುತ್ತಾರೆ. ಜಿಲ್ಲೆಯಲ್ಲಿರುವ ಒಟ್ಟು ಮತದಾರರ ಸಂಖ್ಯೆ – 1803766 ಹಂಚಿಕೆ ಮಾಡಲಾದ ಎನ್ಯುಮರೇಷನ್ ಫಾರ್ಮ್‍ಗಳ ಸಂಖ್ಯೆ – 102035, ಡಿಜಿಟಲೈಸ್ ಮಾಡಿದ ಒಟ್ಟು ಎನ್ಯುಮರೇಷನ್ ಫಾರ್ಮ್‍ಗಳ ಸಂಖ್ಯೆ – 3109

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.02 ಲಕ್ಷ ಎಸ್.ಐ.ಆರ್ ನಮೂನೆ ಹಂಚಿಕೆ Read More »

ಕರಾವಳಿ

ಡಿಸಿ ಆದೇಶ ಉಲ್ಲಂಘಿಸಿ ತರಗತಿ ನಡೆಸಿದ ಪುತ್ತೂರಿನ ಖಾಸಗಿ ಕಾಲೇಜಿಗೆ ತಹಶೀಲ್ದಾರ್ ನೋಟಿಸ್

(ನ್ಯೂಸ್‌ ಕಡಬ) newskadaba.com, ಜು.03 :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದರೂ, ನಿಯಮ ಉಲ್ಲಂಘಿಸಿ ತರಗತಿ ನಡೆಸಿದ ಪುತ್ತೂರಿನ ಖಾಸಗಿ ಕಾಲೇಜೊಂದಕ್ಕೆ ತಹಶೀಲ್ದಾರ್ ಬಿ.ಎಸ್. ಕೂಡಲಗಿ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಹವಾಮಾನ ಇಲಾಖೆಯ ರೆಡ್ ಅಲರ್ಟ್ ಸೂಚನೆಯಂತೆ ಜುಲೈ 2ರಂದು ಜಿಲ್ಲೆಯ ಎಲ್ಲಾ ಶಾಲೆ-ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ಅಧಿಕೃತ ರಜೆ ಆದೇಶ ಹೊರಡಿಸಿದ್ದರು.ಈ ಆದೇಶದ ನಡುವೆಯೂ ಪುತ್ತೂರಿನ ಖಾಸಗಿ ಕಾಲೇಜೊಂದರ ಪದವಿ ಪೂರ್ವ ವಿಭಾಗದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಾಗಿತ್ತು.

ಡಿಸಿ ಆದೇಶ ಉಲ್ಲಂಘಿಸಿ ತರಗತಿ ನಡೆಸಿದ ಪುತ್ತೂರಿನ ಖಾಸಗಿ ಕಾಲೇಜಿಗೆ ತಹಶೀಲ್ದಾರ್ ನೋಟಿಸ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

UP TET ಪರೀಕ್ಷೆ ಆರಂಭ: ಮೊದಲ ದಿನವೇ 15 ನಕಲಿ ಅಭ್ಯರ್ಥಿಗಳ ಬಂಧನ!

(ನ್ಯೂಸ್‌ ಕಡಬ) newskadaba.com, ಜು.03 ಉತ್ತರ ಪ್ರದೇಶದಲ್ಲಿ 3 ದಿನಗಳ ಶಿಕ್ಷಕರ ಅರ್ಹತಾ ಪರೀಕ್ಷೆ (UP TET) ಗುರುವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ದೊಡ್ಡ ವಂಚನೆ ಜಾಲವೊಂದು ಬಯಲಾಗಿದೆ.ಬೇರೆ ಅಭ್ಯರ್ಥಿಗಳ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದ 15 ನಕಲಿ ಅಭ್ಯರ್ಥಿಗಳನ್ನು ಭದ್ರತಾ ತಪಾಸಣೆ ವೇಳೆ ಬಂಧಿಸಲಾಗಿದೆ . ರಾಜ್ಯದ 60 ಜಿಲ್ಲೆಗಳ 955 ಕೇಂದ್ರಗಳಲ್ಲಿ ಎಐ ಕಣ್ಗಾವಲು ಹಾಗೂ ಕಠಿಣ ಭದ್ರತೆಯೊಂದಿಗೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗುತ್ತಿದ್ದು, ಒಟ್ಟು 6.84 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸುತ್ತಿದ್ದಾರೆ. ಬಂಧಿತರ ಕುರಿತು

UP TET ಪರೀಕ್ಷೆ ಆರಂಭ: ಮೊದಲ ದಿನವೇ 15 ನಕಲಿ ಅಭ್ಯರ್ಥಿಗಳ ಬಂಧನ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನೆರಿಯಕಾಡಿನಲ್ಲಿ ಸರ್ಕಾರಿ ಭೂಮಿಯಲ್ಲಿ ಅಕ್ರಮ ಮರ ಕಡಿತ: ಓರ್ವನ ಬಂಧನ, ಭಾರಿ ಪ್ರಮಾಣದ ನಾಟಾ ವಶ

(ನ್ಯೂಸ್‌ ಕಡಬ) newskadaba.com, ಜು.03 ನೆರಿಯ ಗ್ರಾಮದ ನೆರಿಯಕಾಡು ಎಂಬಲ್ಲಿ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಮರ ಕಡಿಯುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿಯ ವೇಳೆ 40 ಮರದ ಹಲಗೆಗಳು ಹಾಗೂ ಮರದಿಂದ ಸಿದ್ಧಪಡಿಸಲಾಗಿದ್ದ 3 ದೊಡ್ಡ ಮರದ ದಿಮ್ಮಿಗಳನ್ನು ವಶಕ್ಕೆ ಪಡೆಯಲಾಗಿದೆ. ಜುಲೈ 2 ರಂದು ನ್ಯಾಯಾಲಯದ ಅನುಮತಿ ಪಡೆದ ಬಳಿಕ ವಶಪಡಿಸಿಕೊಂಡ ಶ್ರೀಮಂತ ಮರವನ್ನು ಇಲಾಖೆಯ ಸುಪರ್ದಿಗೆ ಪಡೆಯಲಾಗಿದ್ದು, ಬೆಳ್ತಂಗಡಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಪ್ರಕರಣ

ನೆರಿಯಕಾಡಿನಲ್ಲಿ ಸರ್ಕಾರಿ ಭೂಮಿಯಲ್ಲಿ ಅಕ್ರಮ ಮರ ಕಡಿತ: ಓರ್ವನ ಬಂಧನ, ಭಾರಿ ಪ್ರಮಾಣದ ನಾಟಾ ವಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪೆಟ್ರೋಲ್ ಬಂಕ್‌ಗೆ ವಂಚಿಸಿ ಪರಾರಿಯಾಗಿದ್ದ ಮೂವರ ಬಂಧನ: ಶಿರ್ವ ಪೊಲೀಸರ ಭರ್ಜರಿ ಕಾರ್ಯಾಚರಣೆ

(ನ್ಯೂಸ್‌ ಕಡಬ) newskadaba.com, ಜು.03 ಉಡುಪಿ: ಪೆಟ್ರೋಲ್ ಬಂಕ್ ಒಂದರಲ್ಲಿ ಫುಲ್ ಟ್ಯಾಂಕ್ ಡೀಸೆಲ್ ಹಾಕಿಸಿಕೊಂಡು, ಹಣ ಪಾವತಿಸದೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತೆ ನಟಿಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಶಿರ್ವ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.ಶಿರ್ವ ಕೋಟೆಕಾರ್‌ನ ಮಹಮ್ಮದ್ ರಿಯಾಜ್ (26), ಭೂತಬೆಟ್ಟಿನ ಮಹಮ್ಮದ್ ಅಫ್ರಾಜ್ (23) ಮತ್ತು ಉಡುಪಿ ಅಂಬಾಗಿಲಿನ ಆಶಿಲ್ (21). ಕೃತ್ಯಕ್ಕೆ ಬಳಸಿದ್ದ ಫೋರ್ಡ್ ಇಕೋಸ್ಪೋರ್ಟ್ ಕಾರು.ಜೂನ್ 27ರ ರಾತ್ರಿ ಕುರ್ಕಾಲು ಗ್ರಾಮದ ಸುಭಾಸ್ ನಗರದ ಪೆಟ್ರೋಲ್ ಬಂಕ್‌ನಲ್ಲಿ ₹4,711 ಮೌಲ್ಯದ ಡೀಸೆಲ್

ಪೆಟ್ರೋಲ್ ಬಂಕ್‌ಗೆ ವಂಚಿಸಿ ಪರಾರಿಯಾಗಿದ್ದ ಮೂವರ ಬಂಧನ: ಶಿರ್ವ ಪೊಲೀಸರ ಭರ್ಜರಿ ಕಾರ್ಯಾಚರಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top