ತಿರುಪತಿ ತಿಮ್ಮಪ್ಪನಿಗೆ ಕರ್ನಾಟಕದ ಹೆಸರಲ್ಲೇ ಮೊದಲ ಆರತಿ ಇನ್ನು ಮುಂದೆ ರಾಜ್ಯದ ಗಣ್ಯರಿಗೂ ಭಾಗವಹಿಸಲು ಅವಕಾಶ



(ನ್ಯೂಸ್‌ ಕಡಬ) newskadaba.com,   ಜು.14: ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ನೆರವೇರುವ ಐತಿಹಾಸಿಕ ‘ಮೊದಲ ಆರತಿ’ಯ ಶಿಷ್ಟಾಚಾರಕ್ಕೆ ಹೊಸ ಆಯಾಮ ದೊರೆತಿದೆ. ಈವರೆಗೆ ಕೇವಲ ಕರ್ನಾಟಕ ಸರ್ಕಾರದ ಅಧಿಕಾರಿಗಳಿಗಷ್ಟೇ ಸೀಮಿತವಾಗಿದ್ದ ಈ ಅವಕಾಶವನ್ನು, ಇನ್ನು ಮುಂದೆ ರಾಜ್ಯದ ಗಣ್ಯರಿಗೂ ವಿಸ್ತರಿಸಲಾಗಿದೆ.







ಹೊಸ ನಿರ್ಧಾರದನ್ವಯ ಕರ್ನಾಟಕದ ಸಚಿವರು, ಶಾಸಕರು, ನ್ಯಾಯಾಧೀಶರು ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಪ್ರಮುಖ ಗಣ್ಯ ವ್ಯಕ್ತಿಗಳು ಈ ಧಾರ್ಮಿಕ ಕೈಂಕರ್ಯದಲ್ಲಿ ಭಾಗವಹಿಸಬಹುದಾಗಿದೆ.ಈ ಕುರಿತು ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಿರುಮಲ ತಿರುಪತಿ ದೇವಸ್ಥಾನಂ ನಿಗದಿಪಡಿಸಿರುವ ಮಾರ್ಗಸೂಚಿಗಳ ಅನ್ವಯವೇ ಎಲ್ಲ ವ್ಯವಸ್ಥೆಗಳು ನಡೆಯಲಿದ್ದು, ಸಾಂಪ್ರದಾಯಿಕ ಶಿಷ್ಟಾಚಾರಕ್ಕೆ ಯಾವುದೇ ಧಕ್ಕೆ ಬಾರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.






ದಶಕಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯವು ಕರ್ನಾಟಕ ಮತ್ತು ತಿರುಮಲ ದೇವಾಲಯದ ನಡುವಿನ ಧಾರ್ಮಿಕ ಹಾಗೂ ಐತಿಹಾಸಿಕ ಬಾಂಧವ್ಯದ ಸಂಕೇತವಾಗಿದೆ. ಇದೀಗ ರಾಜ್ಯದ ಜನಪ್ರತಿನಿಧಿಗಳು ಮತ್ತು ಗಣ್ಯರಿಗೂ ಇದರಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ರಾಜ್ಯಕ್ಕೆ ಸಂದ ಮತ್ತೊಂದು ಗೌರವವಾಗಿದೆ.

 

error: Content is protected !!
Scroll to Top