ಸರ್ಕಾರಿ ಶಾಲೆಗಳ 1 ಮತ್ತು 2ನೇ ತರಗತಿಗೆ ಕಂಪ್ಯೂಟರ್ ಸೈನ್ಸ್ ಪರಿಚಯ; ‘ಡಿಜಿ ಎಂಟ್ರಿ’ ಪಠ್ಯಪುಸ್ತಕ ಬಿಡುಗಡೆ



(ನ್ಯೂಸ್‌ ಕಡಬ) newskadaba.com,   ಜು.14 :ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ 1 ಮತ್ತು 2ನೇ ತರಗತಿಗೆ ಕಂಪ್ಯೂಟರ್ ಸೈನ್ಸ್ ವಿಷಯವನ್ನು ಪರಿಚಯಿಸಿದೆ. ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವತಿಯಿಂದ ಡಿಜಿ ಎಂಟ್ರಿ ಎಂಬ ಪ್ರತ್ಯೇಕ ಡಿಜಿಟಲ್ ಪಠ್ಯಪುಸ್ತಕಗಳನ್ನು ಪ್ರಕಟಿಸಲಾಗಿದೆ.







ಮಕ್ಕಳ ವಯೋಮಟ್ಟಕ್ಕೆ ಅನುಗುಣವಾಗಿ ಕೃತಕ ಮತ್ತು ರೊಬೋಟಿಕ್ಸ್‌ನ ಮೂಲಭೂತ ಅಂಶಗಳನ್ನು ಇದರಲ್ಲಿ ಸೇರಿಸಲಾಗಿದೆ.ಮೊಬೈಲ್, ಟಿವಿ ಮತ್ತು ಕಂಪ್ಯೂಟರ್‌ಗಳಂತಹ ಡಿಜಿಟಲ್ ಸಾಧನಗಳನ್ನು ಗುರುತಿಸುವುದು ಹಾಗೂ ಅವುಗಳ ಬಳಕೆಯನ್ನು ಅರ್ಥಮಾಡಿಕೊಳ್ಳುವುದು.






ಗ್ಯಾಜೆಟ್‌ಗಳ ಬಳಕೆಯ ಸುರಕ್ಷತಾ ನಿಯಮಗಳು, ಸರಿಯಾದ ದೇಹದ ಭಂಗಿ ,ಕಂಪ್ಯೂಟರ್ ಆನ್/ಆಫ್ ಮಾಡುವುದು ಹಾಗೂ ಸ್ಮಾರ್ಟ್ ವಾಚ್, ಪೆನ್ ಡ್ರೈವ್, ಡಿಜಿಟಲ್ ಕ್ಯಾಮೆರಾಗಳ ಪರಿಚಯ. ‘ಪುಟ್ಟಿ ಮತ್ತು ರೊಬೋಟ್’ ಎಂಬ ಪಾಠದ ಮೂಲಕ ರೊಬೋಟ್‌ಗೆ ಸೂಚನೆಗಳನ್ನು ನೀಡುವ ವಿಧಾನವನ್ನು ಮಕ್ಕಳಿಗೆ ಸರಳವಾಗಿ ವಿವರಿಸಲಾಗಿದೆ.

NCERT ಪಠ್ಯದಲ್ಲಿ ಕಂಪ್ಯೂಟರ್ ವಿಷಯವನ್ನು ಇತರ ಸಬ್ಜೆಕ್ಟ್‌ಗಳ ಜೊತೆ ಸೇರಿಸಲಾಗಿದ್ದರೆ, ಕರ್ನಾಟಕ ಸರ್ಕಾರವು ಇದಕ್ಕೆ ಪ್ರತ್ಯೇಕ ಪಠ್ಯಪುಸ್ತಕ ರೂಪಿಸಿದೆ.ಕಂಪ್ಯೂಟರ್ ಸೈನ್ಸ್ ಶಿಕ್ಷಕರ ನೇಮಕಾತಿಗಾಗಿ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ.

error: Content is protected !!
Scroll to Top