ಕರಾವಳಿ

ಖಾಸಗಿ ನೌಕರರಿಗೆ ಕೇಂದ್ರದ ಸಿಹಿ ಸುದ್ದಿ: ಪಿಎಫ್ ಕಡ್ಡಾಯ ವೇತನ ಮಿತಿ ₹15,000 ರಿಂದ ₹25,000 ಕ್ಕೆ ಹೆಚ್ಚಳ

(ನ್ಯೂಸ್‌ ಕಡಬ) newskadaba.com,  ಸೆ.17 .ಖಾಸಗಿ ಹಾಗೂ ಶ್ರಮಿಕ ವಲಯದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಇಪಿಎಫ್ ವ್ಯಾಪ್ತಿಗೆ ಒಳಪಡುವ ಮಾಸಿಕ ವೇತನದ ಗರಿಷ್ಠ ಮಿತಿಯನ್ನು ₹15,000 ರಿಂದ ₹25,000 ಕ್ಕೆ ಹೆಚ್ಚಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ₹25,000 ವರೆಗೆ ಮೂಲ ವೇತನ ಮತ್ತು ತುಟ್ಟಿಭತ್ಯೆ ಪಡೆಯುವ ನೌಕರರಿಗೆ ಇಪಿಎಫ್ ಹಾಗೂ ಪಿಂಚಣಿ ವಂತಿಗೆ ಕಡಿತಗೊಳಿಸುವುದು ಕಂಪನಿಗಳಿಗೆ ಕಡ್ಡಾಯವಾಗಲಿದೆ.ಈ ನಿರ್ಧಾರದಿಂದ ಸರ್ಕಾರಿ ಬೊಕ್ಕಸಕ್ಕೆ ಪ್ರತಿವರ್ಷ ಸುಮಾರು ₹11,339 ಕೋಟಿ ಹೆಚ್ಚುವರಿ ವೆಚ್ಚ ತಗಲಲಿದೆ […]

ಖಾಸಗಿ ನೌಕರರಿಗೆ ಕೇಂದ್ರದ ಸಿಹಿ ಸುದ್ದಿ: ಪಿಎಫ್ ಕಡ್ಡಾಯ ವೇತನ ಮಿತಿ ₹15,000 ರಿಂದ ₹25,000 ಕ್ಕೆ ಹೆಚ್ಚಳ Read More »

ಕರಾವಳಿ

ಜಂತರ್ ಮಂತರ್ ಹಿಂಸಾಚಾರ: ಸುಪ್ರೀಂ ಕೋರ್ಟ್‌ನಿಂದ ಉನ್ನತ ಮಟ್ಟದ ತನಿಖೆಗೆ ಆದೇಶ

(ನ್ಯೂಸ್‌ ಕಡಬ) newskadaba.com, ಸೆ.16 . ಜುಲೈ 20ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ವೇಳೆ ಸಂಭವಿಸಿದ ಹಿಂಸಾಚಾರ ಹಾಗೂ ಘಟನೆಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.ಜುಲೈ 20ರ ಪ್ರತಿಭಟನೆ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ಸಂಘರ್ಷ ನಡೆದಿತ್ತು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಹಾಗೂ ವಿ. ಮೊಹನಾ ಅವರನ್ನೊಳಗೊಂಡ ತ್ರಿಪೀಠ ಈ ನಿರ್ದೇಶನ ನೀಡಿದೆ.ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆರ್. ಸುಭಾಷ್

ಜಂತರ್ ಮಂತರ್ ಹಿಂಸಾಚಾರ: ಸುಪ್ರೀಂ ಕೋರ್ಟ್‌ನಿಂದ ಉನ್ನತ ಮಟ್ಟದ ತನಿಖೆಗೆ ಆದೇಶ Read More »

ಕರಾವಳಿ

ಮಂಗಳೂರು: ಸಾವಿನಲ್ಲೂ ಜೀವ ಸಾರ್ಥಕತೆ ಮೆರೆದ ಕುತ್ತಾರಿನ ಯುವಕ — ಬ್ರೈನ್ ಡೆಡ್ ಆದ ಮಗನ ಅಂಗಾಂಗ ದಾನ ಮಾಡಿದ ಹೆತ್ತವರು

(ನ್ಯೂಸ್‌ ಕಡಬ) newskadaba.com,  ಸೆ.16 . ಗಣೇಶ ಚತುರ್ಥಿದಂದುನಡೆದ ಬೈಕ್ – ಸ್ಕೂಟರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದು, ವೈದ್ಯರ ಸಲಹೆಯಂತೆ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಸೋಮವಾರ ಸಂಜೆ 7:30 ರ ಸುಮಾರಿಗೆ ವರ್ಷಿತ್ ಅವರು ಕುತ್ತಾರುವಿನಿಂದ ಮನೆಗೆ ತೆರಳುತ್ತಿದ್ದಾಗ ಕೊರಗಜ್ಜನ ಆದಿಕ್ಷೇತ್ರದ ಬಳಿ ಎದುರಿನಿಂದ ಬಂದ ಸ್ಕೂಟರ್‌ಗೆ ಭೀಕರವಾಗಿ ಡಿಕ್ಕಿಯಾಗಿದೆ. ಗಂಭೀರ ತಲಪೆಟ್ಟಿನಿಂದಾಗಿ ಅವರನ್ನು ತಕ್ಷಣ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ವೈದ್ಯರು ‘ಬ್ರೈನ್ ಡೆಡ್’ ಎಂದು ಘೋಷಿಸಿದ್ದಾರೆ.

ಮಂಗಳೂರು: ಸಾವಿನಲ್ಲೂ ಜೀವ ಸಾರ್ಥಕತೆ ಮೆರೆದ ಕುತ್ತಾರಿನ ಯುವಕ — ಬ್ರೈನ್ ಡೆಡ್ ಆದ ಮಗನ ಅಂಗಾಂಗ ದಾನ ಮಾಡಿದ ಹೆತ್ತವರು Read More »

ಕರಾವಳಿ

ರೇಣುಕಸ್ವಾಮಿ ಕೊಲೆ ಕೇಸ್: ಜೈಲಿನ ಫೋನ್ ಸೌಲಭ್ಯ ದುರ್ಬಳಕೆ; ಎ-14 ಪ್ರದೂಷ್ ಬಲೆಗೆ!

(ನ್ಯೂಸ್‌ ಕಡಬ) newskadaba.com,  ಸೆ.16 . ರೇಣುಕಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೂಷ್ ರಾವ್ ವಿರುದ್ಧ ಮತ್ತೊಂದು ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಜೈಲಿನಲ್ಲಿನ ನಿಯಮಗಳನ್ನು ಗಾಳಿಗೆ ತೂರಿ, ಅಧಿಕಾರಿಗಳಿಗೆ ವಂಚಿಸಿ ಪತ್ನಿಯೊಂದಿಗೆ ಮಾತನಾಡಲು ಜೈಲಿನ ಫೋನ್ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡಿರುವುದು ಈ ಹೊಸ ಸಂಕಷ್ಟಕ್ಕೆ ಕಾರಣವಾಗಿದೆ. ಜೈಲಿನಿಂದ ಇತ್ತೀಚೆಗಷ್ಟೇ ಬಿಡುಗಡೆಯಾದ ಬೇರೊಬ್ಬ ಕೈದಿಯ ಹೆಸರನ್ನು ಬಳಸಿಕೊಂಡ ಪ್ರದೂಷ್, ಜೈಲಿನ ‘ಇನ್‌ಮೇಟ್ ಕಾಲಿಂಗ್ ಸಿಸ್ಟಮ್’ ನಲ್ಲಿ ತನ್ನ ಪತ್ನಿಯ ಮೊಬೈಲ್ ಸಂಖ್ಯೆಯನ್ನು ‘ಸಂತೋಷ್’ ಎಂಬ ಹೆಸರಿನಲ್ಲಿ ನೋಂದಾಯಿಸಿದ್ದನು.ಈ ತಂತ್ರದ

ರೇಣುಕಸ್ವಾಮಿ ಕೊಲೆ ಕೇಸ್: ಜೈಲಿನ ಫೋನ್ ಸೌಲಭ್ಯ ದುರ್ಬಳಕೆ; ಎ-14 ಪ್ರದೂಷ್ ಬಲೆಗೆ! Read More »

ಕರಾವಳಿ

ಇಂದಿನ ಚಿನ್ನ-ಬೆಳ್ಳಿ ಬೆಲೆ: ಏರಿಕೆ ಕಂಡ ಬಂಗಾರ, ಬದಲಾಗದ ಬೆಳ್ಳಿ ದರ!

(ನ್ಯೂಸ್‌ ಕಡಬ) newskadaba.com,  ಸೆ. 16.  ಇಂದಿನ ಚಿನ್ನದ ಬೆಲೆಯು 24 ಕ್ಯಾರೆಟ್ ಚಿನ್ನದ 1 ಗ್ರಾಂಗೆ 27 ರೂ. ಏರಿಕೆಯಾಗಿದ್ದು, ಪ್ರಸ್ತುತ ದರ 15,344 ರೂ. ತಲುಪಿದೆ. 24 ಕ್ಯಾರೆಟ್ ಚಿನ್ನದ 10 ಗ್ರಾಂಗೆ  270 ರೂ. ಹೆಚ್ಚಳವಾಗಿದ್ದು, 1,53,440 ರೂ. ತಲುಪಿದೆ.22 ಕ್ಯಾರೆಟ್ ಚಿನ್ನದ  10 ಗ್ರಾಂಗೆ 250 ರೂ. ಏರಿಕೆಯೊಂದಿಗೆ 1,40,650 ರೂ. ದಾಖಲಾಗಿದೆ. ಯಾವುದೇ ವ್ಯತ್ಯಾಸವಿಲ್ಲದೆ ತಟಸ್ಥವಾಗಿದ್ದು, 1 ಕೆಜಿ ಬೆಳ್ಳಿಯ ಬೆಲೆ 2,45,000 ರೂ. ಇದೆ.

ಇಂದಿನ ಚಿನ್ನ-ಬೆಳ್ಳಿ ಬೆಲೆ: ಏರಿಕೆ ಕಂಡ ಬಂಗಾರ, ಬದಲಾಗದ ಬೆಳ್ಳಿ ದರ! Read More »

ಕರಾವಳಿ

ಬೆಳ್ತಂಗಡಿ: ಗೃಹಪ್ರವೇಶಕ್ಕೆ ತೆರಳಿದ್ದ ವೇಳೆ ಮನೆಗೆ ಕನ್ನ; 15.82 ಲಕ್ಷ ರೂ. ಮೌಲ್ಯದ ಚಿನ್ನ, ನಗದು ಕಳವು!

(ನ್ಯೂಸ್‌ ಕಡಬ) newskadaba.com,  ಸೆ. 16.  ಬೆಳ್ತಂಗಡಿಯಲ್ಲಿ ಮನೆಯೊಂದಕ್ಕೆ ನುಗ್ಗಿ 15.82 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು; ಪ್ರಕರಣ ದಾಖಲುಮನೆಯವರು ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ಸುಮಾರು 15.82 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 1.80 ಲಕ್ಷ ರೂ. ನಗದು ಕಳವು ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಆಲಂದಿಲದಲ್ಲಿ ನಡೆದಿದೆ.ಆಲಂದಿಲ ನಿವಾಸಿ ನೌಫಾಲ್ ಬಿ.ಎಂ. (34) ಎಂಬವರು ನೀಡಿದ ದೂರಿನಂತೆ ಸೆ. 13 ರಂದು

ಬೆಳ್ತಂಗಡಿ: ಗೃಹಪ್ರವೇಶಕ್ಕೆ ತೆರಳಿದ್ದ ವೇಳೆ ಮನೆಗೆ ಕನ್ನ; 15.82 ಲಕ್ಷ ರೂ. ಮೌಲ್ಯದ ಚಿನ್ನ, ನಗದು ಕಳವು! Read More »

ಕರಾವಳಿ

ಇ-ಕೆವೈಸಿ ಮಾಡಿಸದಿದ್ದರೆ ರೇಷನ್ ಕಾರ್ಡ್ ರದ್ದು ಭೀತಿ: ಗಡುವು ವಿಸ್ತರಣೆಗೆ ಸಾರ್ವಜನಿಕರ ಒತ್ತಾಯ

(ನ್ಯೂಸ್‌ ಕಡಬ) newskadaba.com,  ಸೆ. 16. ರೇಷನ್ ಕಾರ್ಡ್‌ಗಳ ಇ-ಕೆವೈಸಿ ಪೂರ್ಣಗೊಳಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದ್ದು, ಇ-ಕೆವೈಸಿ ಆಗದಿದ್ದರೆ ಕಾರ್ಡ್‌ಗಳು ರದ್ದಾಗುವ ಆತಂಕ ಎದುರಾಗಿದೆ.ಒಟ್ಟು 2.67 ಕೋಟಿ ರೇಷನ್ ಕಾರ್ಡ್‌ಗಳ ಪೈಕಿ ಇದುವರೆಗೂ ಕೇವಲ 97.54 ಲಕ್ಷ (36.44%) ಕಾರ್ಡ್‌ಗಳ ಇ-ಕೆವೈಸಿ ಮಾತ್ರ ಪೂರ್ಣಗೊಂಡಿದೆ. ಇನ್ನೂ 1.70 ಕೋಟಿ ಕಾರ್ಡ್‌ಗಳು ಬಾಕಿ ಇವೆ. ಸರ್ವರ್ ತಾಂತ್ರಿಕ ಕೊರತೆ ಹಾಗೂ ಸಮಯ ಅಭಾವದಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಗಡುವು ವಿಸ್ತರಿಸುವಂತೆ ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬಂದಿದೆ.ಬೆಂಗಳೂರು ಪೂರ್ವ,

ಇ-ಕೆವೈಸಿ ಮಾಡಿಸದಿದ್ದರೆ ರೇಷನ್ ಕಾರ್ಡ್ ರದ್ದು ಭೀತಿ: ಗಡುವು ವಿಸ್ತರಣೆಗೆ ಸಾರ್ವಜನಿಕರ ಒತ್ತಾಯ Read More »

ಕರಾವಳಿ

ಕಾರ್ಕಳ: ಮಕ್ಕಳ ಉದ್ಯಾನವನದ ಬಳಿ ಸತ್ತ ಸ್ಥಿತಿಯಲ್ಲಿ ಕಡವೆ ಪತ್ತೆ

(ನ್ಯೂಸ್‌ ಕಡಬ) newskadaba.com,  ಸೆ. 16. ಕಾರ್ಕಳ ತಾಲೂಕು ಕಚೇರಿ ಸಮೀಪದ ಮಕ್ಕಳ ಉದ್ಯಾನವನದ ಬಳಿ ಸುಮಾರು 1.5 ರಿಂದ 2 ವರ್ಷ ವಯಸ್ಸಿನ ಗಂಡು ಕಡವೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.ಕುಕ್ಕಂದೂರು ಗ್ರಾಮದ ಅರಣ್ಯ ಪ್ರದೇಶದಿಂದ ದಾರಿ ತಪ್ಪಿ ಈ ಭಾಗಕ್ಕೆ ಬಂದಿರಬಹುದು ಎಂದು ಅರಣ್ಯ ಇಲಾಖೆ ಶಂಕಿಸಿದೆ. ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಸಾರ್ವಜನಿಕರು ಇದನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಡವೆಯ ತಲೆ ಹಾಗೂ ಕೊಂಬಿನ ಭಾಗದಲ್ಲಿ ಸಣ್ಣಪುಟ್ಟ ಗಾಯಗಳಿದ್ದು, ಆತಂಕದಿಂದ ಹೃದಯಾಘಾತ ಸಂಭವಿಸಿ ಮೃತಪಟ್ಟಿರಬಹುದು

ಕಾರ್ಕಳ: ಮಕ್ಕಳ ಉದ್ಯಾನವನದ ಬಳಿ ಸತ್ತ ಸ್ಥಿತಿಯಲ್ಲಿ ಕಡವೆ ಪತ್ತೆ Read More »

ಕರಾವಳಿ

6 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

(ನ್ಯೂಸ್‌ ಕಡಬ) newskadaba.com,  ಸೆ. 16. ಪ್ರಕರಣವೊಂದರ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ 6 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಟ್ವಾಳ ನಗರ ಪೊಲೀಸರು ದಸ್ತಗಿರಿ ಮಾಡಿದ್ದಾರೆ.ಮಂಗಳೂರು ಬಜಾಲ್ ನಂತೂರು ನಿವಾಸಿ ಮಹಮ್ಮದ್ ನೌಫಲ್ ಅಲಿಯಾಸ್ ಸಫಾರಿ ನೌಫಲ್(34) ಬಂಧಿತ ಆರೋಪಿ. ಆರೋಪಿಯ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ : 24 /2020, ಕಲಂ: 143, 147, 148, 504, 323, 324, 506, 427 r/w 149

6 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ Read More »

ಕರಾವಳಿ

ದೇಶದ ಶಾಲಾ ಶಿಕ್ಷಣಕ್ಕೆ ಹೊಸ ಮೆರುಗು: ‘PM SHRI’ ಯೋಜನೆಯಡಿ 13,092 ಶಾಲೆಗಳು ಆಯ್ಕೆ

(ನ್ಯೂಸ್‌ ಕಡಬ) newskadaba.com,  ಸೆ.15. ರಾಷ್ಟ್ರೀಯ ಶಿಕ್ಷಣ ನೀತಿಯಡಿ ದೇಶದ ಶಾಲಾ ಶಿಕ್ಷಣವನ್ನು ಜಾಗತಿಕ ಮಟ್ಟಕ್ಕೇರಿಸಲು ಜಾರಿಗೆ ತರಲಾಗಿರುವ ‘ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ’ ಯೋಜನೆ ಮಹತ್ವದ ಮೈಲಿಗಲ್ಲು ತಲುಪಿದೆ. 2026ರ ಜುಲೈ ವೇಳೆಗೆ ದೇಶಾದ್ಯಂತ 13,092 ಶಾಲೆಗಳನ್ನು ಪಿಎಂ ಶ್ರೀ ಶಾಲೆಗಳಾಗಿ ಆಯ್ಕೆ ಮಾಡಲಾಗಿದ್ದು, ನಿಗದಿತ ಗುರಿಯ ಶೇ. 90ರಷ್ಟು ಪ್ರಗತಿ ಸಾಧಿಸಲಾಗಿದೆ.2022ರ ಸೆಪ್ಟೆಂಬರ್ 7ರಂದು ಚಾಲನೆ ನೀಡಲಾದ ಈ ಯೋಜನೆಗೆ ಕೇಂದ್ರ ಸರ್ಕಾರ ₹27,360 ಕೋಟಿ ಮೀಸಲಿಟ್ಟಿದೆ.ಒಟ್ಟು 14,500ಕ್ಕೂ ಹೆಚ್ಚು ಶಾಲೆಗಳನ್ನು

ದೇಶದ ಶಾಲಾ ಶಿಕ್ಷಣಕ್ಕೆ ಹೊಸ ಮೆರುಗು: ‘PM SHRI’ ಯೋಜನೆಯಡಿ 13,092 ಶಾಲೆಗಳು ಆಯ್ಕೆ Read More »

ಕರಾವಳಿ
Scroll to Top