ಇ-ಕೆವೈಸಿ ಮಾಡಿಸದಿದ್ದರೆ ರೇಷನ್ ಕಾರ್ಡ್ ರದ್ದು ಭೀತಿ: ಗಡುವು ವಿಸ್ತರಣೆಗೆ ಸಾರ್ವಜನಿಕರ ಒತ್ತಾಯ

(ನ್ಯೂಸ್‌ ಕಡಬ) newskadaba.com,  ಸೆ. 16. ರೇಷನ್ ಕಾರ್ಡ್‌ಗಳ ಇ-ಕೆವೈಸಿ ಪೂರ್ಣಗೊಳಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದ್ದು, ಇ-ಕೆವೈಸಿ ಆಗದಿದ್ದರೆ ಕಾರ್ಡ್‌ಗಳು ರದ್ದಾಗುವ ಆತಂಕ ಎದುರಾಗಿದೆ.ಒಟ್ಟು 2.67 ಕೋಟಿ ರೇಷನ್ ಕಾರ್ಡ್‌ಗಳ ಪೈಕಿ ಇದುವರೆಗೂ ಕೇವಲ 97.54 ಲಕ್ಷ (36.44%) ಕಾರ್ಡ್‌ಗಳ ಇ-ಕೆವೈಸಿ ಮಾತ್ರ ಪೂರ್ಣಗೊಂಡಿದೆ. ಇನ್ನೂ 1.70 ಕೋಟಿ ಕಾರ್ಡ್‌ಗಳು ಬಾಕಿ ಇವೆ.

ಸರ್ವರ್ ತಾಂತ್ರಿಕ ಕೊರತೆ ಹಾಗೂ ಸಮಯ ಅಭಾವದಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಗಡುವು ವಿಸ್ತರಿಸುವಂತೆ ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬಂದಿದೆ.ಬೆಂಗಳೂರು ಪೂರ್ವ, ರಾಯಚೂರು, ವಿಜಯಪುರ ಮತ್ತು ಬೆಳಗಾವಿಯಲ್ಲಿ 50%ಕ್ಕಿಂತ ಹೆಚ್ಚು ಪ್ರಗತಿಯಾಗಿದ್ದರೆ, ಉಡುಪಿ, ಬಳ್ಳಾರಿ, ಬೀದರ್, ಶಿವಮೊಗ್ಗ, ಕೊಪ್ಪಳ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಶೇ. 20 ರಿಂದ 25 ರಷ್ಟು ಮಾತ್ರ ಕಾರ್ಯ ಮುಗಿದಿದೆ.

Scroll to Top