ಕಾರ್ಕಳ: ಮಕ್ಕಳ ಉದ್ಯಾನವನದ ಬಳಿ ಸತ್ತ ಸ್ಥಿತಿಯಲ್ಲಿ ಕಡವೆ ಪತ್ತೆ

(ನ್ಯೂಸ್‌ ಕಡಬ) newskadaba.com,  ಸೆ. 16. ಕಾರ್ಕಳ ತಾಲೂಕು ಕಚೇರಿ ಸಮೀಪದ ಮಕ್ಕಳ ಉದ್ಯಾನವನದ ಬಳಿ ಸುಮಾರು 1.5 ರಿಂದ 2 ವರ್ಷ ವಯಸ್ಸಿನ ಗಂಡು ಕಡವೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.ಕುಕ್ಕಂದೂರು ಗ್ರಾಮದ ಅರಣ್ಯ ಪ್ರದೇಶದಿಂದ ದಾರಿ ತಪ್ಪಿ ಈ ಭಾಗಕ್ಕೆ ಬಂದಿರಬಹುದು ಎಂದು ಅರಣ್ಯ ಇಲಾಖೆ ಶಂಕಿಸಿದೆ. ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಸಾರ್ವಜನಿಕರು ಇದನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕಡವೆಯ ತಲೆ ಹಾಗೂ ಕೊಂಬಿನ ಭಾಗದಲ್ಲಿ ಸಣ್ಣಪುಟ್ಟ ಗಾಯಗಳಿದ್ದು, ಆತಂಕದಿಂದ ಹೃದಯಾಘಾತ ಸಂಭವಿಸಿ ಮೃತಪಟ್ಟಿರಬಹುದು ಎಂದು ಪಶುವೈದ್ಯರ ಪ್ರಾಥಮಿಕ ತಪಾಸಣೆ ವೇಳೆ ತಿಳಿದುಬಂದಿದೆ.ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ವರದಿ ಬಂದ ಬಳಿಕ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಕಾರ್ಕಳ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಅರುಣ್ ತಿಳಿಸಿದ್ದಾರೆ.

Scroll to Top