ಬೆಸ್ಕಾಂ ‘ಗೃಹ ಜ್ಯೋತಿ’ ಮನೆ-ಮನೆ ಸಮೀಕ್ಷೆಗೆ ಅಕ್ಟೋಬರ್ 31 ಕಡೇ ದಿನ: ಗಡುವು ವಿಸ್ತರಣೆ ಇಲ್ಲ!

(ನ್ಯೂಸ್‌ ಕಡಬ) newskadaba.com, ಅ . 23 . ಬೆಸ್ಕಾಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ‘ಗೃಹ ಜ್ಯೋತಿ’ ಫಲಾನುಭವಿಗಳ ಮನೆ-ಮನೆ ಸಮೀಕ್ಷೆಗೆ ನೀಡಿರುವ ಗಡುವು ಅಕ್ಟೋಬರ್ 31ಕ್ಕೆ ಮುಕ್ತಾಯಗೊಳ್ಳಲಿದ್ದು, ಯಾವುದೇ ಕಾರಣಕ್ಕೂ ಗಡುವು ವಿಸ್ತರಿಸುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಸಮೀಕ್ಷೆ ವೇಳೆ ಮನೆಗೆ ಬೀಗ ಹಾಕಿದ್ದರಿಂದ ಅಥವಾ ಇತರೆ ಕಾರಣಗಳಿಂದ ಪಾಲ್ಗೊಳ್ಳದ ಗ್ರಾಹಕರು, ಕೂಡಲೇ ಅಗತ್ಯ ದಾಖಲಾತಿಗಳೊಂದಿಗೆ ಹತ್ತಿರದ ಬೆಸ್ಕಾಂ ಉಪ ವಿಭಾಗ ಕಚೇರಿಗೆ ಖುದ್ದಾಗಿ ತೆರಳಿ ದಾಖಲೆಗಳನ್ನು ಸಲ್ಲಿಸುವಂತೆ ಮನವಿ ಮಾಡಲಾಗಿದೆ.

ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಒಟ್ಟು 74,29,773 ಫಲಾನುಭವಿಗಳಿದ್ದು, ಅಕ್ಟೋಬರ್ 22ರ ವೇಳೆಗೆ 73,17,687 (ಶೇ. 98.49) ಗ್ರಾಹಕರ ಸಮೀಕ್ಷೆ ಪೂರ್ಣಗೊಂಡಿದೆ. ಬಾಕಿ ಉಳಿದುಕೊಂಡಿರುವವರು ಕೂಡಲೇ ಈ ಅವಕಾಶ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.

Scroll to Top