ಕರಾವಳಿ

ಧರ್ಮಸ್ಥಳ: ನೇತ್ರಾವತಿ ಸ್ನಾನಘಟ್ಟದ ಬಳಿ ಕಾರು ಪಲ್ಟಿ; ಕೋಲಾರದ ಮೂವರಿಗೆ ಗಾಯ

(ನ್ಯೂಸ್‌ ಕಡಬ) newskadaba.com,  ಸೆ.15 ಬೆಳ್ತಂಗಡಿ : ನಿಯಂತ್ರಣ ತಪ್ಪಿ ಕಾರು ಪಲ್ಟಿ – ಮೂವರಿಗೆ ಗಾಯಕೋಲಾರ ಜಿಲ್ಲೆಯ ನಾಲ್ವರು ಕುಟುಂಬ ಸದಸ್ಯರು ಧರ್ಮಸ್ಥಳ ದೇವಸ್ಥಾನಕ್ಕೆ ತೆರಳಿ ಬಳಿಕ ಉಜಿರೆ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಳಿ ನಡೆದಿದೆ. ನೇತ್ರಾವತಿ ಸ್ನಾನಘಟ್ಟದ ಬಳಿಯ ಸರ್ವಿಸ್‌ ಸ್ಟೇಷನ್‌ ಪಕ್ಕದ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿಗೆ ಉರುಳಿ ಪಲ್ಟಿಯಾಗಿದೆ. ಅಪಘಾತದಲ್ಲಿ ಕಾರು ಚಾಲಕ ಶಶಿಕುಮಾರ್ […]

ಧರ್ಮಸ್ಥಳ: ನೇತ್ರಾವತಿ ಸ್ನಾನಘಟ್ಟದ ಬಳಿ ಕಾರು ಪಲ್ಟಿ; ಕೋಲಾರದ ಮೂವರಿಗೆ ಗಾಯ Read More »

ಕರಾವಳಿ

ವಂದೇ ಮಾತರಂ ಮೊದಲ 2 ಚರಣಗಳಿಗೆ ಸೀಮಿತ: ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ PIL

(ನ್ಯೂಸ್‌ ಕಡಬ) newskadaba.com,   ಸೆ .15 . ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ 2 ಚರಣಗಳನ್ನು ಮಾತ್ರ ಹಾಡಬೇಕು ಎಂದು ಸೆಪ್ಟೆಂಬರ್ 8ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಮಾರ್ಗದರ್ಶನಗಳ ಪ್ರಕಾರ 6 ಚರಣಗಳ ಸಂಪೂರ್ಣ ಆವೃತ್ತಿಯೇ ಅಧಿಕೃತವಾಗಿದೆ. ರಾಜ್ಯ ಸರ್ಕಾರದ ಆದೇಶವು ಕೇಂದ್ರದ ಪ್ರೋಟೋಕಾಲ್ ಹಾಗೂ ಸಂವಿಧಾನದ ವಿಧಿ 256, 257(1)ಕ್ಕೆ ವಿರುದ್ಧವಾಗಿದೆ ಎಂದು ವಾದಿಸಲಾಗಿದೆ. ರಾಷ್ಟ್ರೀಯ ಸಂಕೇತಗಳ ವಿಷಯವು

ವಂದೇ ಮಾತರಂ ಮೊದಲ 2 ಚರಣಗಳಿಗೆ ಸೀಮಿತ: ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ PIL Read More »

ಕರಾವಳಿ

ಯುಪಿಐ, ರೂಪೇ ಕಾರ್ಡ್ ಬಳಕೆದಾರರಿಗೆ ಭಾರಿ ರಿಲೀಫ್: ₹2,000 ವರೆಗೆ ಇಲ್ಲ ಪಾವತಿ ಶುಲ್ಕ

(ನ್ಯೂಸ್‌ ಕಡಬ) newskadaba.com,   ಸೆ .15 . ಡಿಜಿಟಲ್‌ ಪಾವತಿ ಬಳಕೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂ. ವರೆಗೆ ನಡೆಯುವ ಯುಪಿಐ ವಹಿವಾಟುಗಳಿಗೆ ಯಾವುದೇ ನೇರ ಅಥವಾ ಪರೋಕ್ಷ ಶುಲ್ಕ ವಿಧಿಸುವಂತಿಲ್ಲ ಎಂದು ತಿಳಿಸಿದೆ. ಇದೇ ನಿಯಮ ರೂಪೇ ಡೆಬಿಟ್ ಕಾರ್ಡ್ ಮೂಲಕ ನಡೆಯುವ ಪಾವತಿಗಳಿಗೂ ಅನ್ವಯವಾಗಲಿದೆ. ಬ್ಯಾಂಕ್‌ಗಳು ಅಥವಾ ಪಾವತಿ ವ್ಯವಸ್ಥೆ ಒದಗಿಸುವ ಸಂಸ್ಥೆಗಳು ಇಂತಹ ವಹಿವಾಟುಗಳಿಗೆ ಗ್ರಾಹಕರಿಂದ ಯಾವುದೇ ಶುಲ್ಕ ವಸೂಲಿ ಮಾಡುವಂತಿಲ್ಲ. ಕೇಂದ್ರ ಹಣಕಾಸು ಸಚಿವಾಲಯವು ಪಾವತಿ

ಯುಪಿಐ, ರೂಪೇ ಕಾರ್ಡ್ ಬಳಕೆದಾರರಿಗೆ ಭಾರಿ ರಿಲೀಫ್: ₹2,000 ವರೆಗೆ ಇಲ್ಲ ಪಾವತಿ ಶುಲ್ಕ Read More »

ಕರಾವಳಿ

ರಷ್ಯಾದಿಂದ ತೈಲ ಆಮದು: ಭಾರತ ಸೇರಿ ಇತರ ದೇಶಗಳ ಮೇಲೆ 100% ಸುಂಕ ಹೇರಲು ಅಮೆರಿಕ ಸಂಸದರ ಪ್ರಸ್ತಾಪ

(ನ್ಯೂಸ್‌ ಕಡಬ) newskadaba.com,   ಸೆ .15 . ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಭಾರತ ಸೇರಿದಂತೆ ಇತರ ದೇಶಗಳ ಮೇಲೆ ಶೇ. 100 ರಷ್ಟು ಸುಂಕ ನಿರ್ಬಂಧ ಹೇರಲು ಅಮೆರಿಕದ ಸಂಸದರು ತಿದ್ದುಪಡಿ ಪ್ರಸ್ತಾಪಿಸಿದ್ದಾರೆ. ಕಳೆದ ತಿಂಗಳು ಅಮೆರಿಕ ಸಂಸತ್‌ನಲ್ಲಿ 89-11 ಮತಗಳಿಂದ ಒಪ್ಪಿಗೆ ಪಡೆದ ‘ದಿ ಲಿಂಡ್ಸೆ ಒ ಗ್ರಾಹಮ್ ಸ್ಯಾಂಕ್ಷನಿಂಗ್ ರಷ್ಯಾ ಆಂಡ್ ಇರಾನ್ ಆಕ್ಟ್’ ಮಸೂದೆಯು ಪ್ರಸ್ತುತ ಅಮೆರಿಕದ ಪ್ರತಿನಿಧಿಗಳ ಸಭೆಯ ಮುಂದಿದೆ.ಈ ಮಸೂದೆಯು ಕಾನೂನಾಗಲು ಪ್ರತಿನಿಧಿಗಳ ಸಭೆಯ ಅಂಗೀಕಾರ ಮತ್ತು

ರಷ್ಯಾದಿಂದ ತೈಲ ಆಮದು: ಭಾರತ ಸೇರಿ ಇತರ ದೇಶಗಳ ಮೇಲೆ 100% ಸುಂಕ ಹೇರಲು ಅಮೆರಿಕ ಸಂಸದರ ಪ್ರಸ್ತಾಪ Read More »

ಕರಾವಳಿ

ನಕಲಿ ಪಿಎಚ್‌ಡಿ ತಡೆಗೆ ಕಾಲೇಜು ಶಿಕ್ಷಣ ಇಲಾಖೆ ಕಠಿಣ ಕ್ರಮ: 452 ಅತಿಥಿ ಉಪನ್ಯಾಸಕರಿಗೆ ನೋಟಿಸ್

(ನ್ಯೂಸ್‌ ಕಡಬ) newskadaba.com,   ಸೆ .15. ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಕಲಿ ಪಿಎಚ್‌ಡಿ (PhD) ಪ್ರಮಾಣಪತ್ರ ಸಲ್ಲಿಕೆ ತಡೆಯಲು ಕಾಲೇಜು ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, 452 ಅತಿಥಿ ಉಪನ್ಯಾಸಕರಿಗೆ ನೋಟಿಸ್ ಜಾರಿಗೊಳಿಸಿದೆ. 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸುವಾಗ ಪಿಎಚ್‌ಡಿ ಅರ್ಹತೆ ಇದೆ ಎಂದು ನಮೂದಿಸಿದ್ದ ಈ 452 ಉಪನ್ಯಾಸಕರು, 2026-27ನೇ ಸಾಲಿನ ಆನ್‌ಲೈನ್ ಅರ್ಜಿಯಲ್ಲಿ ಪಿಎಚ್‌ಡಿ ಅರ್ಹತೆಯನ್ನು ನಮೂದಿಸಿಲ್ಲ. ಈ ವ್ಯತ್ಯಾಸದಿಂದಾಗಿ ಇಲಾಖೆಗೆ ನಕಲಿ ದಾಖಲೆ ಸಲ್ಲಿಕೆಯ ಶಂಕೆ ವ್ಯಕ್ತವಾಗಿದೆ.

ನಕಲಿ ಪಿಎಚ್‌ಡಿ ತಡೆಗೆ ಕಾಲೇಜು ಶಿಕ್ಷಣ ಇಲಾಖೆ ಕಠಿಣ ಕ್ರಮ: 452 ಅತಿಥಿ ಉಪನ್ಯಾಸಕರಿಗೆ ನೋಟಿಸ್ Read More »

ಕರಾವಳಿ

ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ: ಸೆಪ್ಟೆಂಬರ್ 21 ರಿಂದ 3 ದಿನಗಳ ವಿಶೇಷ ಅಧಿವೇಶನ ಆಹುತಿ

(ನ್ಯೂಸ್‌ ಕಡಬ) newskadaba.com,   ಸೆ .15. ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರಗಾಲ ಹಾಗೂ ಪಶ್ಚಿಮ ಘಟ್ಟಗಳ ಕಸ್ತೂರಿ ರಂಗನ್ ವರದಿ ಕುರಿತು ವಿಸ್ತೃತ ಚರ್ಚೆ ನಡೆಸಲು ರಾಜ್ಯ ಸರ್ಕಾರ ಸೆಪ್ಟೆಂಬರ್ 21 ರಿಂದ ಮೂರು ದಿನಗಳ ಕಾಲ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದಿದೆ. ಸೆಪ್ಟೆಂಬರ್ 21, 22 ಮತ್ತು 23 ರಂದು ವಿಶೇಷ ಅಧಿವೇಶನ ಕರೆಯಲು ಸರ್ಕಾರ ತೀರ್ಮಾನಿಸಿದೆ. ರಾಜ್ಯದಲ್ಲಿ ಎದುರಾಗಿರುವ ಭೀಕರ ಬರ ಪರಿಸ್ಥಿತಿ, ಜಾನುವಾರುಗಳ ಮೇವಿನ ಅಭಾವ ಹಾಗೂ ಪಶ್ಚಿಮ ಘಟ್ಟಗಳ ಕಸ್ತೂರಿ

ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ: ಸೆಪ್ಟೆಂಬರ್ 21 ರಿಂದ 3 ದಿನಗಳ ವಿಶೇಷ ಅಧಿವೇಶನ ಆಹುತಿ Read More »

ಕರಾವಳಿ

ಕಟಪಾಡಿ: ಬಾವಿಗೆ ಬಿದ್ದಿದ್ದ ನವಿಲನ್ನು ರಕ್ಷಿಸಿದ ಉಡುಪಿ ಅಗ್ನಿಶಾಮಕ ಸಿಬ್ಬಂದಿ

(ನ್ಯೂಸ್‌ ಕಡಬ) newskadaba.com,   ಸೆ .15. ಕಟಪಾಡಿ ಕೋಟೆ ಪ್ರದೇಶದಲ್ಲಿ ಬಾವಿಗೆ ಬಿದ್ದಿದ್ದ ನವಿಲೊಂದನ್ನು ಉಡುಪಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸೋಮವಾರ ಸಂಜೆ ಸುರಕ್ಷಿತವಾಗಿ ರಕ್ಷಿಸಿದ್ದಾರೆ.ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ಸಿಬ್ಬಂದಿ ಮಹಾಬಲೇಶ್ವರ ಅವರು ಬಾವಿಗಿಳಿದು ನವಿಲಿಗೆ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಮೇಲಕ್ಕೆ ತಂದರು.ಅಶ್ವಿನ್ ಸುನಿಲ್, ಮಹಾಬಲೇಶ್ವರ, ನಾಗೇಶ್ ಪೂಜಾರಿ, ಸುಧೀರ್, ಅಮರ್ ಹಾಗೂ ಗಣೇಶ್ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಸಮಯೋಚಿತ ಸ್ಪಂದನೆ ಹಾಗೂ ಧೈರ್ಯದ ಕೆಲಸಕ್ಕೆ ಉಡುಪಿ

ಕಟಪಾಡಿ: ಬಾವಿಗೆ ಬಿದ್ದಿದ್ದ ನವಿಲನ್ನು ರಕ್ಷಿಸಿದ ಉಡುಪಿ ಅಗ್ನಿಶಾಮಕ ಸಿಬ್ಬಂದಿ Read More »

ಕರಾವಳಿ

ಬೆಳ್ತಂಗಡಿ: ಕೊಕ್ಕಡ ಬಳಿ ಕಾರು-ಕೆಎಸ್‌ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com, ಸೆ. 12. ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹಲವರು ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಕ್ಕಡ ಸಮೀಪ ಶನಿವಾರ ಸಂಭವಿಸಿದೆ. ಧರ್ಮಸ್ಥಳದಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಕಾರು ಹಾಗೂ ಸುಬ್ರಹ್ಮಣ್ಯದಿಂದ ಧರ್ಮಸ್ಥಳದತ್ತ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಈ ಅಪಘಾತ ಸಂಭವಿಸಿದೆ. ಕ್ಕಿಯ ರಭಸಕ್ಕೆ ಬಸ್ ಮತ್ತು ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರು ಹಾಗೂ ಕಾರಿನಲ್ಲಿದ್ದ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ

ಬೆಳ್ತಂಗಡಿ: ಕೊಕ್ಕಡ ಬಳಿ ಕಾರು-ಕೆಎಸ್‌ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ Read More »

ಕರಾವಳಿ

ಕಟಪಾಡಿ ಅಂಡರ್‌ಪಾಸ್ ಬಳಿ ಮೀನು ತುಂಬಿದ ಲಾರಿ ಪಲ್ಟಿ

(ನ್ಯೂಸ್‌ ಕಡಬ) newskadaba.com, ಸೆ. 12. ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಟಪಾಡಿ ಅಂಡರ್‌ಪಾಸ್ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಶನಿವಾರ ಮುಂಜಾನೆ ಮೀನು ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಲಾರಿಯು ಉಡುಪಿಯಿಂದ ಮಂಗಳೂರಿನ ಕಡೆಗೆ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅಂಡರ್‌ಪಾಸ್ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸ್ಥಳದಲ್ಲಿ ಸಾರ್ವಜನಿಕ ಹಾಗೂ ವಾಹನ ಸಂಚಾರಕ್ಕಾಗಿ ಪರ್ಯಾಯ ರಸ್ತೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ, ಚಾಲಕನು ಕಾಮಗಾರಿ ಪ್ರದೇಶದ ಬಳಿ ಅಳವಡಿಸಲಾಗಿದ್ದ ಎಚ್ಚರಿಕೆ ಹಾಗೂ ಸೂಚನಾ ಫಲಕಗಳನ್ನು ಗಮನಿಸದೇ, ಪರ್ಯಾಯ

ಕಟಪಾಡಿ ಅಂಡರ್‌ಪಾಸ್ ಬಳಿ ಮೀನು ತುಂಬಿದ ಲಾರಿ ಪಲ್ಟಿ Read More »

ಕರಾವಳಿ

ಯುಪಿಐ ಬಳಕೆದಾರರಿಗೆ ಆರ್‌ಬಿಐ ನಿಂದ ಸಿಹಿ ಸುದ್ದಿ

(ನ್ಯೂಸ್‌ ಕಡಬ) newskadaba.com, ಸೆ. 12. ಭಾರತೀಯ ರಿಸರ್ವ್ ಬ್ಯಾಂಕ್ ಯುಪಿಐ ಬಳಕೆದಾರರಿಗಾಗಿ ಮುಂಬೈನಲ್ಲಿ ನಡೆದ Global Fintech Fest 2026 ರಲ್ಲಿ ಎರಡು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಆಫ್‌ಲೈನ್ ಪಾವತಿ ಹಾಗೂ ಸುಲಭ ಬೆಂಬಲ ಸೇವೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಮೊಬೈಲ್‌ನಲ್ಲಿ ಇಂಟರ್‌ನೆಟ್ ಸಂಪರ್ಕವಿಲ್ಲದಿದ್ದರೂ ಸ್ಮಾರ್ಟ್‌ಫೋನ್ ಅನ್‌ಲಾಕ್ ಮಾಡಿ POS (Point of Sale) ಸ್ಕ್ಯಾನರ್ ಮೇಲೆ ಟ್ಯಾಪ್ ಮಾಡುವ ಮೂಲಕ ಸರಳವಾಗಿ ಪಾವತಿ ಮಾಡಬಹುದು.NPCI ಅಭಿವೃದ್ಧಿಪಡಿಸಿದ ಸಣ್ಣ ಭಾಷಾ ಮಾದರಿ ಆಧಾರಿತ ಸಹಾಯ

ಯುಪಿಐ ಬಳಕೆದಾರರಿಗೆ ಆರ್‌ಬಿಐ ನಿಂದ ಸಿಹಿ ಸುದ್ದಿ Read More »

ಕರಾವಳಿ
Scroll to Top