(ನ್ಯೂಸ್ ಕಡಬ) newskadaba.com, ಜು.13 : ಭಾರತದ ಬಹುದಿನಗಳ ಕನಸಾದ ಬುಲೆಟ್ ರೈಲು ಯೋಜನೆ ಶೀಘ್ರದಲ್ಲೇ ಸಾಕಾರಗೊಳ್ಳಲಿದ್ದು, ಮುಂಬೈ – ಅಹಮದಾಬಾದ್ ನಡುವಿನ ಹೈ-ಸ್ಪೀಡ್ ರೈಲು ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಒಟ್ಟು 508 ಕಿ.ಮೀ ಉದ್ದದ ಮುಂಬೈ-ಅಹಮದಾಬಾದ್ ಕಾರಿಡಾರ್ ಅನ್ನು ಒಂದೇ ಬಾರಿಗೆ ತೆರೆಯುವ ಬದಲು ಹಂತ-ಹಂತವಾಗಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು.ಮುಂದಿನ ವರ್ಷ ಸೂರತ್ ಮತ್ತು ಬಿಲಿಮೋರಾ ನಡುವಿನ ಮೊದಲ ವಿಭಾಗದಲ್ಲಿ ಬುಲೆಟ್ ರೈಲು ಸಂಚಾರ ಅಧಿಕೃತವಾಗಿ ಆರಂಭವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ ವಲಯಕ್ಕೆ 3 ಪ್ರಮುಖ ಹೈ-ಸ್ಪೀಡ್ ಕಾರಿಡಾರ್ಗಳನ್ನು ಮಂಜೂರು ಮಾಡಿದ್ದು, ಇದು ದಕ್ಷಿಣ ಭಾರತದ ಪ್ರಮುಖ ಹಬ್ ಆಗಿ ಮಾರ್ಪಡಲಿದೆ.







