ಸಿಎಸ್‌ಕೆ ಮುಖ್ಯ ಕೋಚ್ ಹುದ್ದೆಯಿಂದ ಸ್ಟೀಫನ್ ಫ್ಲೆಮಿಂಗ್ ಮುಕ್ತಿ 18 ವರ್ಷಗಳ ಸುದೀರ್ಘ ಜರ್ನಿ ಅಂತ್ಯ!



(ನ್ಯೂಸ್‌ ಕಡಬ) newskadaba.com,  ಜು.13  :ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮುಖ್ಯ ಕೋಚ್ ಹುದ್ದೆಯಿಂದ ಸ್ಟೀಫನ್ ಫ್ಲೆಮಿಂಗ್ ಕೆಳಗಿಳಿದಿದ್ದಾರೆ. ಕಳೆದ ಕೆಲವು ಸೀಸನ್‌ಗಳಲ್ಲಿ ತಂಡದ ನಿರೀಕ್ಷಿತ ಪ್ರದರ್ಶನದ ಕೊರತೆಯ ಹಿನ್ನೆಲೆಯಲ್ಲಿ, ಫ್ರಾಂಚೈಸಿ ಮತ್ತು ಫ್ಲೆಮಿಂಗ್ ಪರಸ್ಪರ ಮಾತುಕತೆಯ ಮೂಲಕ ಗೌರವಯುತವಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ.







2008ರ ಚೊಚ್ಚಲ ಐಪಿಎಲ್‌ನಲ್ಲಿ ಸಿಎಸ್‌ಕೆ ಆರಂಭಿಕ ಆಟಗಾರನಾಗಿದ್ದ ಫ್ಲೆಮಿಂಗ್, ನಿವೃತ್ತಿಯ ನಂತರ 2009ರಲ್ಲಿ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದರು.






ಎಂ.ಎಸ್. ಧೋನಿ ಅವರೊಂದಿಗೆ ಸೇರಿ ಸಿಎಸ್‌ಕೆಯನ್ನು ಬಲಿಷ್ಠ ತಂಡವಾಗಿ ಬೆಳೆಸಿದ ಇವರು, ತಂಡಕ್ಕೆ 5 ಐಪಿಎಲ್ ಟ್ರೋಫಿ ಹಾಗೂ 2 ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ.ಈ ನಿರ್ಧಾರದೊಂದಿಗೆ ಸಿಎಸ್‌ಕೆ ಜೊತೆಗಿನ ಫ್ಲೆಮಿಂಗ್ ಅವರ 18 ವರ್ಷಗಳ ಸುದೀರ್ಘ ನಂಟು ಮುಕ್ತಾಯವಾಗಿದ್ದು, ಮುಂಬರುವ ಸೀಸನ್‌ನಲ್ಲಿ ತಂಡಕ್ಕೆ ಹೊಸ ಕೋಚ್ ನೇಮಕವಾಗಲಿದ್ದಾರೆ.

 

error: Content is protected !!
Scroll to Top