(ನ್ಯೂಸ್ ಕಡಬ) newskadaba.com, ಸೆ.17 .ಖಾಸಗಿ ಹಾಗೂ ಶ್ರಮಿಕ ವಲಯದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಇಪಿಎಫ್ ವ್ಯಾಪ್ತಿಗೆ ಒಳಪಡುವ ಮಾಸಿಕ ವೇತನದ ಗರಿಷ್ಠ ಮಿತಿಯನ್ನು ₹15,000 ರಿಂದ ₹25,000 ಕ್ಕೆ ಹೆಚ್ಚಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

₹25,000 ವರೆಗೆ ಮೂಲ ವೇತನ ಮತ್ತು ತುಟ್ಟಿಭತ್ಯೆ ಪಡೆಯುವ ನೌಕರರಿಗೆ ಇಪಿಎಫ್ ಹಾಗೂ ಪಿಂಚಣಿ ವಂತಿಗೆ ಕಡಿತಗೊಳಿಸುವುದು ಕಂಪನಿಗಳಿಗೆ ಕಡ್ಡಾಯವಾಗಲಿದೆ.ಈ ನಿರ್ಧಾರದಿಂದ ಸರ್ಕಾರಿ ಬೊಕ್ಕಸಕ್ಕೆ ಪ್ರತಿವರ್ಷ ಸುಮಾರು ₹11,339 ಕೋಟಿ ಹೆಚ್ಚುವರಿ ವೆಚ್ಚ ತಗಲಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

₹25,000 ಕ್ಕಿಂತ ಹೆಚ್ಚು ವೇತನ ಪಡೆಯುವ ಹೊಸ ಉದ್ಯೋಗಿಗಳಿಗೆ ಪಿಎಫ್ಗೆ ಸೇರ್ಪಡೆಯಾಗುವುದು ಕಡ್ಡಾಯವಾಗಿರುವುದಿಲ್ಲ.ಕಡ್ಡಾಯ ಪಿಎಫ್ ವಂತಿಗೆಯನ್ನು ಲೆಕ್ಕಹಾಕುವ ಗರಿಷ್ಠ ವೇತನ ಮಿತಿ ₹15,000 ರಷ್ಟೇ ಮುಂದುವರಿಯಲಿದೆ.




