(ನ್ಯೂಸ್ ಕಡಬ) newskadaba.com, ಸೆ.17 . ಮಂಗಳೂರಿನ ಪಡೀಲ್ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ (ಪ್ರಜಾಸೌಧ) ಯಲ್ಲಿ ಸೆಪ್ಟೆಂಬರ್ 18ರಂದು ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣ ಹಾಗೂ ಗಣ್ಯರ ಭದ್ರತೆಯ ಹಿತದೃಷ್ಟಿಯಿಂದ ಮಂಗಳೂರು ನಗರ ಪೊಲೀಸರು ಸಂಚಾರ ಸಲಹೆ ಮತ್ತು ಪರ್ಯಾಯ ಮಾರ್ಗಗಳ ಸೂಚನೆ ನೀಡಿದ್ದಾರೆ.

ಸೆ. 17ರ ಸಂಜೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರು ಬಜಪೆ ವಿಮಾನ ನಿಲ್ದಾಣದ ಮೂಲಕ ನಗರಕ್ಕೆ ಆಗಮಿಸಲಿದ್ದು, ಸೆ. 18ರಂದು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆ. 19ರ ಬೆಳಿಗ್ಗೆ ನಿರ್ಗಮಿಸಲಿದ್ದಾರೆ.ಬಜಪೆ ವಿಮಾನ ನಿಲ್ದಾಣ – ಕಾವೂರು – ಬೋಂದೆಲ್ – ಮೇರಿಹಿಲ್ – ಕೆ.ಪಿ.ಟಿ – ಕದ್ರಿ ಕಂಬಳ – ಬಂಟ್ಸ್ ಹಾಸ್ಟೆಲ್ – ಡಾ| ಬಿ.ಆರ್.ಅಂಬೇಡ್ಕರ್ ಜಂಕ್ಷನ್ – ಹಂಪನಕಟ್ಟೆ – ಕ್ಲಾಕ್ ಟವರ್ – ಹ್ಯಾಮಿಲ್ಟನ್ ಜಂಕ್ಷನ್ ಹಾಗೂ ಪಡೀಲ್ ಸಂಪರ್ಕಿಸುವ ರಸ್ತೆಗಳು.ವಿಐಪಿ ಸಂಚಾರದ ಮಾರ್ಗಗಳಲ್ಲಿ ರಸ್ತೆಬದಿಯಲ್ಲಿ ಯಾವುದೇ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಆಂಬ್ಯುಲೆನ್ಸ್ ಹಾಗೂ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆ ಇರುವುದಿಲ್ಲ.
ಬದ್ರಿಯಾ ಜಂಕ್ಷನ್ – ಹ್ಯಾಮಿಲ್ಟನ್ ಜಂಕ್ಷನ್ ನಿಲೇಶ್ವರ ರಸ್ತೆ ಹಾಗೂ ರೋಸಾರಿಯೋ ರಸ್ತೆ ಬಳಸುವುದು. ಹ್ಯಾಮಿಲ್ಟನ್ ಜಂಕ್ಷನ್ – ಬದ್ರಿಯಾ ಜಂಕ್ಷನ್ ನೆಲ್ಲಿಕಾಯಿ ರಸ್ತೆ ಮುಖೇನಾ ಸಂಚರಿಸುವುದು. ಪಂಪ್ವೆಲ್ – ಪಡೀಲ್ ಮಾರ್ಗನಂತೂರು ವೃತ್ತ – ಕೈಕಂಬ – ಮರೋಳಿ ಮಾರ್ಗ ಅಥವಾ ತೊಕ್ಕೊಟ್ಟು – ದೇರಳಕಟ್ಟೆ – ಮುಡಿಪು – ಮೆಲ್ಕಾರ್ ಮಾರ್ಗ ಬಳಸುವುದು. ಬಜಾಲ್ / ಕಂಕನಾಡಿ ರೈಲ್ವೆ ನಿಲ್ದಾಣ ಮಾರ್ಗ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುಂದುವರಿದು ಜಪ್ಪಿನಮೊಗರು ದ್ವಾರ – ಬಜಾಲ್ ಮೂಲಕ ಸಂಚರಿಸುವುದು. ತೊಕ್ಕೊಟ್ಟು – ಪಂಪ್ವೆಲ್ ಮಾರ್ಗ: ಮಹಾಕಾಳಿಪಡ್ಪು – ಮಂಗಳಾದೇವಿ ಮೂಲಕ ನಗರ ಪ್ರವೇಶಿಸುವುದು.




