ಬ್ರೇಕಿಂಗ್ ನ್ಯೂಸ್

ಐವಿಎಫ್, ಬಾಡಿಗೆ ತಾಯ್ತನ ಕೇಂದ್ರಗಳಿಗೆ ಕೇಂದ್ರದ ಹೊಸ ಗೈಡ್‌ಲೈನ್ಸ್: ಲೈಸೆನ್ಸ್ ನವೀಕರಣ ಕಡ್ಡಾಯ, ತಪ್ಪಿದರೆ ಭಾರಿ ದಂಡ!

(ನ್ಯೂಸ್‌ ಕಡಬ) newskadaba.com, ಜು.02: ದೇಶಾದ್ಯಂತ ಹೆಚ್ಚುತ್ತಿರುವ ಐವಿಎಫ್ ಮತ್ತು ನೆರವು ಸಂತಾನೋತ್ಪತ್ತಿ ತಂತ್ರಜ್ಞಾನ ಕೇಂದ್ರಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.ಎಲ್ಲಾ ಫರ್ಟಿಲಿಟಿ ಕ್ಲಿನಿಕ್‌ಗಳು ಮತ್ತು ವೀರ್ಯ ಬ್ಯಾಂಕುಗಳು ಪ್ರತಿ 5 ವರ್ಷಗಳಿಗೊಮ್ಮೆ ಹಾಗೂ ಸರೊಗಸಿ ಚಿಕಿತ್ಸಾಲಯಗಳು ಪ್ರತಿ 3 ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಪರವಾನಗಿ ನವೀಕರಿಸಬೇಕು. ಲೈಸೆನ್ಸ್ ಅವಧಿ ಮುಗಿಯುವ ಕನಿಷ್ಠ 60 ದಿನಗಳ ಮುಂಚಿತವಾಗಿ ರಾಷ್ಟ್ರೀಯ ART ಮತ್ತು ಸರೊಗಸಿ ನೋಂದಣಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯ.ಹಂತ-1 IVF […]

ಐವಿಎಫ್, ಬಾಡಿಗೆ ತಾಯ್ತನ ಕೇಂದ್ರಗಳಿಗೆ ಕೇಂದ್ರದ ಹೊಸ ಗೈಡ್‌ಲೈನ್ಸ್: ಲೈಸೆನ್ಸ್ ನವೀಕರಣ ಕಡ್ಡಾಯ, ತಪ್ಪಿದರೆ ಭಾರಿ ದಂಡ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

52 ಕ್ರಿಮಿನಲ್ ಕೇಸ್ ಹಿಂಪಡೆಯುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್

(ನ್ಯೂಸ್‌ ಕಡಬ) newskadaba.com, ಜು.02: ಕರ್ನಾಟಕ ಸರ್ಕಾರ 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಕುರಿತ ಪ್ರಮುಖ ಮುಖ್ಯಾಂಶಗಳು ಈ ಕೆಳಗಿನಂತಿವೆ:ಯು.ಟಿ. ಖಾದರ್ ಅವರ ಶಿಫಾರಸಿನ ಮೇರೆಗೆ ಕಲಬುರಗಿಯ ಲಾಡ್ಲೆ ಮಶಾಕ್ ದರ್ಗಾ ಗಲಭೆ ಹಾಗೂ ಕೋಮುಗಲಭೆ ಪ್ರಕರಣಗಳು ಸೇರಿದಂತೆ ಒಟ್ಟು 52 ಕೇಸ್‌ಗಳನ್ನು ವಾಪಸ್ ಪಡೆಯಲು 2026ರ ಮೇ 27ರಂದು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಮುಖ್ಯ ನ್ಯಾಯಮೂರ್ತಿ ವಿಬು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರ

52 ಕ್ರಿಮಿನಲ್ ಕೇಸ್ ಹಿಂಪಡೆಯುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗುಟ್ಕಾ ಉಗುಳುವ ಧಾವಂತ ತಂದಿಟ್ಟ ಆಪತ್ತು: ಚಲಿಸುವ ಬಸ್ಸಿನಲ್ಲೇ ರುಂಡ ಕತ್ತರಿಸಿ ಬಿದ್ದ ಯುವಕ

(ನ್ಯೂಸ್‌ ಕಡಬ) newskadaba.com, ಜು.02: ಚಲಿಸುವ ಬಸ್ಸಿನ ಕಿಟಕಿಯಿಂದ ಹೊರಗೆ ತಲೆಹಾಕಿದ ಪರಿಣಾಮ, ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿಯಾಗಿ ಯುವಕನೊಬ್ಬ ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ಹೊರವಲಯದಲ್ಲಿ ಸಂಭವಿಸಿದೆ.ಶಿರೂರು ಗ್ರಾಮದ ಐಟಿಐ ವಿದ್ಯಾರ್ಥಿ ಫಕೀರೇಶ (17). ಹುಬ್ಬಳ್ಳಿಯಿಂದ ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ತೆರಳುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಬಸ್ಸಿನ ಹಿಂಬದಿ ಸೀಟಿನಲ್ಲಿ ಫಕೀರೇಶ ಕುಳಿತಿದ್ದ. ಬಸ್ ಚಲಿಸುತ್ತಿದ್ದಾಗ ಗುಟ್ಕಾ ಉಗುಳಲು ಆತ ಕಿಟಕಿಯಿಂದ ತಲೆಯನ್ನು ಹೊರಗೆ ಹಾಕಿದ್ದಾನೆ. ಈ

ಗುಟ್ಕಾ ಉಗುಳುವ ಧಾವಂತ ತಂದಿಟ್ಟ ಆಪತ್ತು: ಚಲಿಸುವ ಬಸ್ಸಿನಲ್ಲೇ ರುಂಡ ಕತ್ತರಿಸಿ ಬಿದ್ದ ಯುವಕ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ ತಾಲೂಕಿನಲ್ಲಿ ವರುಣನ ಆರ್ಭಟ: ಮರ ಬಿದ್ದು ಮನೆಗಳು ಜಖಂ, ನಿರಾಶ್ರಿತರಾದ ನಿವಾಸಿಗಳು

(ನ್ಯೂಸ್‌ ಕಡಬ) newskadaba.com, ಜು.02: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೂರು ಮನೆಗಳಿಗೆ ಭಾರಿ ಹಾನಿ ಸಂಭವಿಸಿದೆ. ಅಜೆಕಲ ನಿವಾಸಿ ಚಂದ್ರಶೇಖರ ಅವರ ಮನೆ ಮೇಲೂ ಮರ ಬಿದ್ದಿದ್ದು, ನಿವಾಸವು ವಾಸಕ್ಕೆ ಸಂಪೂರ್ಣ ಅಯೋಗ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರು ಸದ್ಯ ಬಾಡಿಗೆ ಮನೆಯನ್ನು ಆಶ್ರಯಿಸಿದ್ದಾರೆ. ಅಲಂಗಾರು ನಿವಾಸಿ ವನಜಾ ಅವರ ಮನೆಯೂ ಭಾರಿ ಮಳೆಯ ಪರಿಣಾಮ ಹಾನಿಗೊಳಗಾಗಿದೆ ಎಂದು ವರದಿಯಾಗಿದೆ.

ಬಂಟ್ವಾಳ ತಾಲೂಕಿನಲ್ಲಿ ವರುಣನ ಆರ್ಭಟ: ಮರ ಬಿದ್ದು ಮನೆಗಳು ಜಖಂ, ನಿರಾಶ್ರಿತರಾದ ನಿವಾಸಿಗಳು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹಸು ವಧೆ ಸಂಪೂರ್ಣ ನಿಷೇಧ ಆದೇಶಕ್ಕೆ ತಡೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ

(ನ್ಯೂಸ್‌ ಕಡಬ) newskadaba.com, ಜು.02:ಬಕ್ರೀದ್ ಸೇರಿದಂತೆ ಯಾವುದೇ ದಿನಗಳಲ್ಲಿ ಹಸು ಮತ್ತು ಕರುಗಳ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಸರ್ಕಾರದ ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ಮೂಲಕ ಈ ಅರ್ಜಿ ಸಲ್ಲಿಕೆಯಾಗಿದೆ. ಕೊಯಂಬತ್ತೂರಿನ ಸಾರ್ವಜನಿಕ ಸ್ಥಳಗಳಲ್ಲಿ ಬಕ್ರೀದ್ ವೇಳೆ ಹಸು ವಧೆ ತಡೆಯುವ ಕುರಿತು ಮಾತ್ರ ಮೂಲ ಅರ್ಜಿ ಇತ್ತು. ಆದರೆ ಹೈಕೋರ್ಟ್ ತನ್ನ ವ್ಯಾಪ್ತಿ ಮೀರಿ ರಾಜ್ಯಾದ್ಯಂತ ಸಂಪೂರ್ಣ ನಿಷೇಧ

ಹಸು ವಧೆ ಸಂಪೂರ್ಣ ನಿಷೇಧ ಆದೇಶಕ್ಕೆ ತಡೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅರಂತೋಡು: ಬಿಳಿಯಾರಿನಲ್ಲಿ ಕೃಷಿಕನ ತೋಟಕ್ಕೆ ಕಾಡಾನೆ ದಾಳಿ; ಭಾರಿ ಪ್ರಮಾಣದ ಬೆಳೆ ಹಾನಿ

(ನ್ಯೂಸ್‌ ಕಡಬ) newskadaba.com, ಜು.02 ಸುಳ್ಯ: ತಾಲೂಕಿನ ಅರಂತೋಡು ಗ್ರಾಮದ ಬಿಳಿಯಾರಿನಲ್ಲಿ ಕೃಷಿಕರೊಬ್ಬರ ತೋಟಕ್ಕೆ ಕಾಡಾನೆಗಳು ದಾಳಿ ನಡೆಸಿ, ಭಾರಿ ಪ್ರಮಾಣದ ಕೃಷಿ ಹಾನಿ ಉಂಟುಮಾಡಿವೆ. ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಬಾಳೆ ಸೇರಿದಂತೆ ಹಲವು ವಾಣಿಜ್ಯ ಬೆಳೆಗಳನ್ನು ಸಂಪೂರ್ಣವಾಗಿ ನಾಶಪಡಿಸಿದೆ. ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಶಬ್ದದಿಂದಾಗಿ ಕಾಡಾನೆಗಳು ತೋಟಕ್ಕೆ ನುಗ್ಗಿರುವ ವಿಷಯ ತಕ್ಷಣಕ್ಕೆ ಮನೆಯವರ ಗಮನಕ್ಕೆ ಬಂದಿಲ್ಲ. ಇದರ ಲಾಭ ಪಡೆದ ಆನೆಗಳು ಸುದೀರ್ಘ ಸಮಯ ತೋಟದಲ್ಲೇ ಮೊಕ್ಕಾಂ ಹೂಡಿ ಮತ್ತಷ್ಟು ಬೆಳೆ ಹಾನಿ

ಅರಂತೋಡು: ಬಿಳಿಯಾರಿನಲ್ಲಿ ಕೃಷಿಕನ ತೋಟಕ್ಕೆ ಕಾಡಾನೆ ದಾಳಿ; ಭಾರಿ ಪ್ರಮಾಣದ ಬೆಳೆ ಹಾನಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಳ್ಳಾಲ: ಭಾರಿ ಮಳೆಗೆ ಖಾಸಗಿ ಎಸ್ಟೇಟ್ ಕಾಂಪೌಂಡ್ ಗೋಡೆ ಕುಸಿದು ಮನೆ ನೆಲಸಮ; ಪ್ರಾಣಹಾನಿ ಮುಂಜಾಗ್ರತೆಯಿಂದ ಮುಕ್ತಿ

(ನ್ಯೂಸ್‌ ಕಡಬ) newskadaba.com,   ಜು.01 ಮಂಗಳೂರು: ಉಳ್ಳಾಲದ ತೊಕ್ಕೊಟ್ಟು ಬಳಿಯ ಕೆರೆಬೈಲ್‌ನಲ್ಲಿ ಖಾಸಗಿ ಎಸ್ಟೇಟ್‌ವೊಂದರ ಬೃಹತ್ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ, ಪಕ್ಕದ ಕಿಶೋರ್ ಎಂಬುವವರ ಮನೆ ಸಂಪೂರ್ಣವಾಗಿ ನೆಲಸಮವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಕಳೆದ ವರ್ಷ ಸುರಿದ ಭಾರಿ ಮಳೆಗೆ ಈ ಗೋಡೆ ಕಿಶೋರ್ ಅವರ ಮನೆಯತ್ತ ವಾಲಿತ್ತು. ಅಪಾಯವನ್ನು ಅರಿತ ಉಳ್ಳಾಲ ನಗರ ಪುರಸಭೆ ಅಧಿಕಾರಿಗಳು, ಎರಡು ವಾರಗಳ ಹಿಂದಷ್ಟೇ ಕಿಶೋರ್ ಅವರ ಕುಟುಂಬ ಸೇರಿದಂತೆ ಸುತ್ತಮುತ್ತಲಿನ 10 ಮನೆಗಳ ನಿವಾಸಿಗಳನ್ನು

ಉಳ್ಳಾಲ: ಭಾರಿ ಮಳೆಗೆ ಖಾಸಗಿ ಎಸ್ಟೇಟ್ ಕಾಂಪೌಂಡ್ ಗೋಡೆ ಕುಸಿದು ಮನೆ ನೆಲಸಮ; ಪ್ರಾಣಹಾನಿ ಮುಂಜಾಗ್ರತೆಯಿಂದ ಮುಕ್ತಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗೃಹ ಜ್ಯೋತಿ ಫಲಾನುಭವಿಗಳ ಗಮನಕ್ಕೆ: ಇಂದಿನಿಂದ ಭೌತಿಕ ತಪಾಸಣೆ, ಈ ದಾಖಲೆಗಳು ಕಡ್ಡಾಯ

(ನ್ಯೂಸ್‌ ಕಡಬ) newskadaba.com,   ಜು.01: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ‘ಗೃಹ ಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಮರುಪರಿಶೀಲನಾ ಪ್ರಕ್ರಿಯೆ ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿದೆ. ರಾಜ್ಯದ 5 ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಮತ್ತು ಸೆಸ್ಕ್ ವ್ಯಾಪ್ತಿಯಲ್ಲಿ ಈ ಮನೆ-ಮನೆ ತಪಾಸಣಾ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ಸಂಪೂರ್ಣ ವರದಿ ಇಲ್ಲಿದೆ:2023ರ ಜುಲೈನಲ್ಲಿ ಜಾರಿಗೆ ಬಂದ ಈ ಯೋಜನೆಯ ಫಲಾನುಭವಿಗಳ ಮನೆಗಳಿಗೆ ಎಸ್ಕಾಂಗಳ ಮೀಟರ್ ರೀಡರ್‌ಗಳು ಹಾಗೂ

ಗೃಹ ಜ್ಯೋತಿ ಫಲಾನುಭವಿಗಳ ಗಮನಕ್ಕೆ: ಇಂದಿನಿಂದ ಭೌತಿಕ ತಪಾಸಣೆ, ಈ ದಾಖಲೆಗಳು ಕಡ್ಡಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಮ್ಮ ಮೆಟ್ರೋ ಸರಣಿ ವ್ಯತ್ಯಯ: ಬಿಎಂಆರ್‌ಸಿಎಲ್‌ಗೆ ಸಮಗ್ರ ತನಿಖೆ ನಡೆಸಲು ರೈಲ್ವೆ ಸುರಕ್ಷತಾ ಆಯುಕ್ತರ ಆದೇಶ

(ನ್ಯೂಸ್‌ ಕಡಬ) newskadaba.com,   ಜು.01: ಬೆಂಗಳೂರು ಮೆಟ್ರೋ ಜಾಲದಲ್ಲಿ ಇತ್ತೀಚೆಗೆ ಪದೇ ಪದೇ ಸಂಭವಿಸುತ್ತಿರುವ ತಾಂತ್ರಿಕ ದೋಷ ಹಾಗೂ ಸೇವಾ ವ್ಯತ್ಯಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತರು,ಈ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬಿಎಂಆರ್‌ಸಿಎಲ್‌ಗೆ ಆದೇಶಿಸಿದ್ದಾರೆ. ಜೂನ್ 23 ರಂದು ಪರ್ಪಲ್ ಲೈನ್‌ನಲ್ಲಿ ಉಂಟಾಗಿದ್ದ ತಾಂತ್ರಿಕ ದೋಷದ ಕುರಿತು ತನಿಖೆ ನಡೆಸುವಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಜೂನ್ 25 ರಂದು ರೈಲ್ವೆ ಸುರಕ್ಷತಾ ಆಯುಕ್ತರಿಗೆ

ನಮ್ಮ ಮೆಟ್ರೋ ಸರಣಿ ವ್ಯತ್ಯಯ: ಬಿಎಂಆರ್‌ಸಿಎಲ್‌ಗೆ ಸಮಗ್ರ ತನಿಖೆ ನಡೆಸಲು ರೈಲ್ವೆ ಸುರಕ್ಷತಾ ಆಯುಕ್ತರ ಆದೇಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರು-ಮಂಗಳೂರು ನಡುವೆ ಚತುಷ್ಪಥ ರೈಲು ಮಾರ್ಗ ಅಭಿವೃದ್ಧಿ: ಕೇಂದ್ರ ಸಚಿವ ವಿ. ಸೋಮಣ್ಣ ಪ್ರಕಟಣೆ

(ನ್ಯೂಸ್‌ ಕಡಬ) newskadaba.com,   ಜು.01: ಬೆಂಗಳೂರಿನಿಂದ 100 ಕಿ.ಮೀ. ಸುತ್ತಮುತ್ತಲಿನ ನಗರಗಳಿಗೆ ಹಾಗೂ ಕರಾವಳಿಯ ಮಂಗಳೂರಿಗೆ ಚತುಷ್ಪಥ ರೈಲ್ವೆ ಮಾರ್ಗವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಪ್ರಕಟಿಸಿದ್ದಾರೆ. ಚನ್ನಪಟ್ಟಣದ ಎಲೆಕೇರಿ ಬಳಿ ನೂತನ ರಸ್ತೆ ಮೇಲ್ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ವಿಷಯ ತಿಳಿಸಿದರು. ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಮಂಡಿಸಿದ ಕರ್ನಾಟಕದ ರೈಲ್ವೆ ಬೇಡಿಕೆಗಳಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಚತುಷ್ಪಥ ಮಾರ್ಗದ ಸರ್ವೆ

ಬೆಂಗಳೂರು-ಮಂಗಳೂರು ನಡುವೆ ಚತುಷ್ಪಥ ರೈಲು ಮಾರ್ಗ ಅಭಿವೃದ್ಧಿ: ಕೇಂದ್ರ ಸಚಿವ ವಿ. ಸೋಮಣ್ಣ ಪ್ರಕಟಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top