ಅರಂತೋಡು: ಬಿಳಿಯಾರಿನಲ್ಲಿ ಕೃಷಿಕನ ತೋಟಕ್ಕೆ ಕಾಡಾನೆ ದಾಳಿ; ಭಾರಿ ಪ್ರಮಾಣದ ಬೆಳೆ ಹಾನಿ

(ನ್ಯೂಸ್‌ ಕಡಬ) newskadaba.com, ಜು.02 ಸುಳ್ಯ: ತಾಲೂಕಿನ ಅರಂತೋಡು ಗ್ರಾಮದ ಬಿಳಿಯಾರಿನಲ್ಲಿ ಕೃಷಿಕರೊಬ್ಬರ ತೋಟಕ್ಕೆ ಕಾಡಾನೆಗಳು ದಾಳಿ ನಡೆಸಿ, ಭಾರಿ ಪ್ರಮಾಣದ ಕೃಷಿ ಹಾನಿ ಉಂಟುಮಾಡಿವೆ.

ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಬಾಳೆ ಸೇರಿದಂತೆ ಹಲವು ವಾಣಿಜ್ಯ ಬೆಳೆಗಳನ್ನು ಸಂಪೂರ್ಣವಾಗಿ ನಾಶಪಡಿಸಿದೆ. ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಶಬ್ದದಿಂದಾಗಿ ಕಾಡಾನೆಗಳು ತೋಟಕ್ಕೆ ನುಗ್ಗಿರುವ ವಿಷಯ ತಕ್ಷಣಕ್ಕೆ ಮನೆಯವರ ಗಮನಕ್ಕೆ ಬಂದಿಲ್ಲ. ಇದರ ಲಾಭ ಪಡೆದ ಆನೆಗಳು ಸುದೀರ್ಘ ಸಮಯ ತೋಟದಲ್ಲೇ ಮೊಕ್ಕಾಂ ಹೂಡಿ ಮತ್ತಷ್ಟು ಬೆಳೆ ಹಾನಿ ಮಾಡಿವೆ ಎಂದು ತಿಳಿದುಬಂದಿದೆ.

Scroll to Top