ಆಗಸ್ಟ್ 8 ಮತ್ತು 9ರಂದು ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ



(ನ್ಯೂಸ್ ಕಡಬ) newskadaba.com ಜು. 23. ಕರ್ನಾಟಕ ಅನಿವಾಸಿ ಭಾರತೀಯರ ಒಕ್ಕೂಟ ಜಿದ್ದಾ ಘಟಕದ ವತಿಯಿಂದ ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ಬೆಂಗಳೂರು, ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ರೋಶನಿ ನಿಲಯ ಮಂಗಳೂರು ಸಹಯೋಗದೊಂದಿಗೆ ಆಗಸ್ಟ್ 8 ಮತ್ತು 9ರಂದು ಅಂಗವೈಕಲ್ಯ ವಿಕಲಚೇತನರ ಭವಿಷ್ಯದ ಜೀವನಕ್ಕಾಗಿ ಉಚಿತ ಕೃತಕ ಕೈಕಾಲು ಜೋಡಣಾ ಶಿಬಿರ ನಗರದ ವೆಲೆನ್ಸಿಯಾ ಜೆಪ್ಪುನಲ್ಲಿರುವ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದ ಸಭಾಂಗಣದಲ್ಲಿ ನಡೆಯಲಿದೆ.
       







ಉತ್ತಮ ಗುಣಮಟ್ಟದ ಹಗುರ ಗಾತ್ರದ ಜೈಪುರ್ ಲಿಂಬ್ನ್ನು ಉಚಿತವಾಗಿ ಶಿಬಿರ ನಡೆಯುವ ದಿನ ಅಳತೆ ತೆಗೆದು ಅಂದೇ ದಿನ ಅಳವಡಿಸಲಾಗುತ್ತದೆ. ಪರಿಶೀಲನೆ, ಕೃತಕ ಅಂಗಾಂಗ, ಜೋಡಣೆ ಸಂಪೂರ್ಣ ಉಚಿತವಾಗಿದ್ದು, ಯಾವುದೇ ಜಿಲ್ಲೆ ಅಥವಾ ರಾಜ್ಯದ ಬಡ/ಅಶಕ್ತ ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
     






ಶಿಬಿರಕ್ಕೂ ಮುನ್ನ ಅರ್ಹ ಫಲಾನುಭವಿಗಳು ಅಂಗಾಂಗದ ಫೋಟೋ, ಆಧಾರ್ ಕಾರ್ಡ್ ಅಥವಾ ಇತರ ಯಾವುದೇ ದಾಖಲೆ ಮತ್ತು ಸಂಪರ್ಕ ಸಂಖ್ಯೆಯನ್ನು ದೂ.ಸಂ: 9019111177 / 9743266456 / 9341111116 ಗೆ ವಾಟ್ಸಪ್ ಮೂಲಕ ಶಿಬಿರ ನಡೆಯುವ ಮುಂಚಿತವಾಗಿ ಕಳುಹಿಸಿಕೊಡಬೇಕು ಎಂದು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top