(ನ್ಯೂಸ್ ಕಡಬ) newskadaba.com, ಜು.02: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೂರು ಮನೆಗಳಿಗೆ ಭಾರಿ ಹಾನಿ ಸಂಭವಿಸಿದೆ.
ಅಜೆಕಲ ನಿವಾಸಿ ಚಂದ್ರಶೇಖರ ಅವರ ಮನೆ ಮೇಲೂ ಮರ ಬಿದ್ದಿದ್ದು, ನಿವಾಸವು ವಾಸಕ್ಕೆ ಸಂಪೂರ್ಣ ಅಯೋಗ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರು ಸದ್ಯ ಬಾಡಿಗೆ ಮನೆಯನ್ನು ಆಶ್ರಯಿಸಿದ್ದಾರೆ.
ಅಲಂಗಾರು ನಿವಾಸಿ ವನಜಾ ಅವರ ಮನೆಯೂ ಭಾರಿ ಮಳೆಯ ಪರಿಣಾಮ ಹಾನಿಗೊಳಗಾಗಿದೆ ಎಂದು ವರದಿಯಾಗಿದೆ.









