ಬ್ರೇಕಿಂಗ್ ನ್ಯೂಸ್

ಚೊಕ್ಕಬೆಟ್ಟು ಮಠದ ಬಳಿ ಕಾರ್ಮಿಕನ ನಿಗೂಢ ಮೃತ್ಯು : ತೀವ್ರಗೊಂಡ ತನಿಖೆ, ಇಬ್ಬರ ವಿಚಾರಣೆ

(ನ್ಯೂಸ್‌ ಕಡಬ) newskadaba.com,  ಜು.20 : ಸುರತ್ಕಲ್‌ನ ಚೊಕ್ಕಬೆಟ್ಟು ಮಠದ ಸಮೀಪವಿರುವ ಬಾಡಿಗೆ ಮನೆಯ ಬಾವಿಯಲ್ಲಿ ಕಾರ್ಮಿಕ ಮಲ್ಲಿಕಾರ್ಜುನ ಅವರ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆ ಎಂದು ಶಂಕಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನೊಂದಿಗೆ ವಾಸವಾಗಿದ್ದ ಆತನ ಅಣ್ಣ ಸೋಮನಾಥ್ (21) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಾಥಮಿಕ ತನಿಖೆಯಲ್ಲಿ ಆತನೇ ಪ್ರಮುಖ ಶಂಕಿತನೆಂದು ತಿಳಿದುಬಂದಿದೆ. ತನಿಖೆಯ ಭಾಗವಾಗಿ ಪಕ್ಕದ ಮನೆಯ ಮತ್ತೋರ್ವ ಯುವಕನನ್ನೂ ಸುರತ್ಕಲ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. […]

ಚೊಕ್ಕಬೆಟ್ಟು ಮಠದ ಬಳಿ ಕಾರ್ಮಿಕನ ನಿಗೂಢ ಮೃತ್ಯು : ತೀವ್ರಗೊಂಡ ತನಿಖೆ, ಇಬ್ಬರ ವಿಚಾರಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡೆಪಾಲದಲ್ಲಿ ಮಹಿಳೆಯ ನಿಗೂಢ ಮೃತ್ಯು ಆತ್ಮಹತ್ಯೆಯೋ? ವ್ಯವಸ್ಥಿತ ಕೊಲೆಯೋ? ತನಿಖೆ ಆರಂಭಿಸಿದ ಸುಳ್ಯ ಪೊಲೀಸ್

(ನ್ಯೂಸ್‌ ಕಡಬ) newskadaba.com,  ಜು.20   :  ಸಂಪಾಜೆ ಕಡೆಪಾಲದಲ್ಲಿ 22 ವರ್ಷದ ವಿವಾಹಿತ ಮಹಿಳೆ ಫಾತಿಮತ್ ನಿಶಾನ ಜುಲೈ 18ರಂದು ರಾತ್ರಿ ತೀವ್ರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. 4 ವರ್ಷಗಳ ಹಿಂದೆ ಕಡೆಪಾಲದ ಅನ್ಸಾರ್ ಅವರೊಂದಿಗೆ ಮದುವೆಯಾಗಿದ್ದ ನಿಶಾನ ಅವರಿಗೆ 2.5 ವರ್ಷದ ಮಗುವಿದೆ. ಘಟನೆಯ ರಾತ್ರಿ ನಿಶಾನ ಅವರು ತಮ್ಮ ತಾಯಿ ಜುಬೈದಾ ಅವರಿಗೆ ಕರೆ ಮಾಡಿ ಗಂಡನ ಮನೆಯವರಿಂದ ಕಿರುಕುಳವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು. ತಕ್ಷಣ ತಾಯಿ ಮಗಳ ಮನೆಗೆ ಧಾವಿಸಿದಾಗ ನಿಶಾನ ಮೃತದೇಹ

ಕಡೆಪಾಲದಲ್ಲಿ ಮಹಿಳೆಯ ನಿಗೂಢ ಮೃತ್ಯು ಆತ್ಮಹತ್ಯೆಯೋ? ವ್ಯವಸ್ಥಿತ ಕೊಲೆಯೋ? ತನಿಖೆ ಆರಂಭಿಸಿದ ಸುಳ್ಯ ಪೊಲೀಸ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗರಿ: ‘ಡಿಜಿಟಲ್ ಸಾಕ್ಷರತೆ’ಯ ಮಹತ್ವ ಸಾರುವ ತುಳು ಚಿತ್ರ ‘ಇಂಬು’ಗೆ ಸಂದ ಗೌರವ

(ನ್ಯೂಸ್‌ ಕಡಬ) newskadaba.com,  ಜು.20 : ಪ್ರಶಸ್ತಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ,ವಿಜೇತ ಚಿತ್ರ: ಇಂಬು (ಅತ್ಯುತ್ತಮ ತುಳು ಚಲನಚಿತ್ರ),ನಿರ್ದೇಶನ: ಶಿವಧ್ವಜ್ ಶೆಟ್ಟಿ | ನಿರ್ಮಾಣ: ಪ್ರಶಾಂತ್ ರೈ ಗ್ರಾಮೀಣ ಸಂಪ್ರದಾಯ ಮತ್ತು ಆಧುನಿಕ ತಂತ್ರಜ್ಞಾನದ ನಡುವಿನ ಸಂಘರ್ಷವನ್ನು ಹೊಂದಿರುವ ಈ ಚಿತ್ರವು, ಇಂದಿನ ಡಿಜಿಟಲ್ ಯುಗದಲ್ಲಿ ‘ಡಿಜಿಟಲ್ ಸಾಕ್ಷರತೆ’ಯ ಮಹತ್ವವನ್ನು ಸಾರುತ್ತದೆ. ಹಿರಿಯ ನಟ ನವೀನ್ ಡಿ. ಪಡೀಲ್ ಅವರು ಗ್ರಾಮೀಣ ಅರ್ಚಕ ‘ಬಾಲಣ್ಣ’ ಎಂಬ ಪ್ರಮುಖ ಪಾತ್ರದಲ್ಲಿದ್ದಾರೆ. ಮೊಬೈಲ್ ಫೋನ್ ಖರೀದಿಸಿದ ಬಳಿಕ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗರಿ: ‘ಡಿಜಿಟಲ್ ಸಾಕ್ಷರತೆ’ಯ ಮಹತ್ವ ಸಾರುವ ತುಳು ಚಿತ್ರ ‘ಇಂಬು’ಗೆ ಸಂದ ಗೌರವ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹೊಳೆಯಿಂದ ಅಕ್ರಮವಾಗಿ ಮರಳು ಎತ್ತುತ್ತಿದ್ದ ಸ್ಥಳಕ್ಕೆ ವಿಟ್ಲ ಪೊಲೀಸರ ಎಂಟ್ರಿ: ಇಬ್ಬರು ಆರೋಪಿಗಳ ವಿರುದ್ಧ ಕೇಸ್

(ನ್ಯೂಸ್‌ ಕಡಬ) newskadaba.com,  ಜು.20 : ವಿಟ್ಲ ಕಸಬಾ ಗ್ರಾಮದ ಕಂಬಳಬೆಟ್ಟುವಿನ ನೆಕ್ಕರೆಯಲ್ಲಿ ಹೊಳೆಯಿಂದ ಅಕ್ರಮವಾಗಿ ಮರಳು ಹೊರತೆಗೆದು ಗೋಣಿ ಚೀಲಗಳಿಗೆ ತುಂಬಿಸುತ್ತಿದ್ದ ಸ್ಥಳದ ಮೇಲೆ ವಿಟ್ಲ ಪೊಲೀಸರು ದಾಳಿ ನಡೆಸಿದ್ದಾರೆ. ಕುಳಾ ಗ್ರಾಮದ ಕಾರ್ಯಾಡಿ ನಿವಾಸಿ ಮೊಹಮ್ಮದ್ ಮತ್ತು ಒಕ್ಕೆತ್ತೂರು ನಿವಾಸಿ ಶರೀಫ್.ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 60 ಚೀಲ ಮರಳು. ವಿಶ್ವಾಸಾರ್ಹ ಮಾಹಿತಿ ಆಧರಿಸಿ ವಿಟ್ಲ ಸಬ್-ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಹೊಳೆಯಿಂದ ಅಕ್ರಮವಾಗಿ ಮರಳು ಎತ್ತುತ್ತಿದ್ದ ಸ್ಥಳಕ್ಕೆ ವಿಟ್ಲ ಪೊಲೀಸರ ಎಂಟ್ರಿ: ಇಬ್ಬರು ಆರೋಪಿಗಳ ವಿರುದ್ಧ ಕೇಸ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಂಕ್ ಫುಡ್‌ಗೆ ಬ್ರೇಕ್: ಶಾಲೆ ಮತ್ತು ಆಸ್ಪತ್ರೆಗಳಲ್ಲಿ ನಿಷೇಧಿಸಲು ಸರ್ಕಾರದ ಮುನ್ನಡೆ

(ನ್ಯೂಸ್‌ ಕಡಬ) newskadaba.com,  ಜು.20 ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಈ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ: ಬರ್ಗರ್, ಪೀಜ್ಜಾದಂತಹ ಜಂಕ್ ಫುಡ್‌ಗಳಿಂದ ಅನಾರೋಗ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, 10ನೇ ತರಗತಿಯವರೆಗಿನ ಶಾಲೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಇವುಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.ಆಹಾರ ಸುರಕ್ಷತೆಯನ್ನು ಖಾತ್ರಿಪಡಿಸಲು ಬೆಂಗಳೂರಿನಲ್ಲಿರುವ ಆಹಾರ ತಪಾಸಣಾ ಪ್ರಯೋಗಾಲಯವನ್ನು ಅತ್ಯಾಧುನಿಕ ಮಟ್ಟಕ್ಕೆ ಅಭಿವೃದ್ಧಿಪಡಿಸಲಾಗುವುದು. ಜಂಕ್ ಫುಡ್ ತಯಾರಿಸುವ ದೊಡ್ಡ ಕಂಪನಿಗಳ ಆಹಾರ ಗುಣಮಟ್ಟದಲ್ಲಿ

ಜಂಕ್ ಫುಡ್‌ಗೆ ಬ್ರೇಕ್: ಶಾಲೆ ಮತ್ತು ಆಸ್ಪತ್ರೆಗಳಲ್ಲಿ ನಿಷೇಧಿಸಲು ಸರ್ಕಾರದ ಮುನ್ನಡೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿಗೆ ಕೆಲಸಕ್ಕೆಂದು ಹೋದ ಯುವಕ ನಿಗೂಢ ನಾಪತ್ತೆ; ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

(ನ್ಯೂಸ್‌ ಕಡಬ) newskadaba.com,  ಜು.20 ಕಡಬ: ಕಳಾರ ಅಡ್ಕಾಡಿ ನಿವಾಸಿ ಮುಹಮ್ಮದ್ ಅಕ್ಬರ್ (21) ಎಂಬ ಯುವಕ ಜುಲೈ 16ರಿಂದ ನಾಪತ್ತೆಯಾಗಿದ್ದು, ಪತ್ತೆಗಾಗಿ ಕಡಬ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ. ಅಬ್ದುಲ್ ರಶೀದ್ ಅವರ ಪುತ್ರನಾದ ಮುಹಮ್ಮದ್ ಅಕ್ಬರ್, ಜು. 16ರಂದು ಬೆಳಗ್ಗೆ 9:30ಕ್ಕೆ ಉಪ್ಪಿನಂಗಡಿಯ ‘ರಾಯೀನ್ ಬಟ್ಟೆ ಅಂಗಡಿ’ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಸಂಜೆಯಾದರೂ ಅವರು ಮನೆಗೆ ಮರಳಿ ಬಂದಿಲ್ಲ. ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಯುವಕನ ಯಾವುದೇ ಸುಳಿವು

ಉಪ್ಪಿನಂಗಡಿಗೆ ಕೆಲಸಕ್ಕೆಂದು ಹೋದ ಯುವಕ ನಿಗೂಢ ನಾಪತ್ತೆ; ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಾದಕ ವಸ್ತು ಮಾರಾಟ ಜಾಲ ಪತ್ತೆ; ಮೂವರು ಡ್ರಗ್ ಪೆಡ್ಲರ್‌ಗಳ ಬಂಧನ

(ನ್ಯೂಸ್‌ ಕಡಬ) newskadaba.com,  ಜು.20 ಉಡುಪಿ: ಉಡುಪಿ, ಕಾಪು, ಮಣಿಪಾಲ ಮತ್ತು ಕಾರ್ಕಳ ಪರಿಸರದಲ್ಲಿ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಉಡುಪಿ ಪೊಲೀಸರು ಪತ್ತೆಹಚ್ಚಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ವಿಜಯ ಪೂಜಾರಿ (36, ಪಿತ್ರೋಡಿ ಉದ್ಯಾವರ), ಪಿ. ಎ. ಮೊಹಮ್ಮದ್ ಸಮ್ಮಾಸ್ (24, ಕುಕ್ಕುಂದೂರು), ಮತ್ತು ಆಕಾಶ್ ಶೆಟ್ಟಿ (20, ಮಿಯಾರು ಕಾರ್ಕಳ). ಶಿವಳ್ಳಿ ಗ್ರಾಮದಲ್ಲಿ ನಡೆಸಿದ ಈ ದಾಳಿಯ ವೇಳೆ ಆರೋಪಿಗಳಿಂದ 4 ಗ್ರಾಂ ಎಂಡಿಎಂಎ ಪುಡಿ, 2.5 ಗ್ರಾಂ ಹೈಡ್ರೋ ಗಾಂಜಾ,

ಮಾದಕ ವಸ್ತು ಮಾರಾಟ ಜಾಲ ಪತ್ತೆ; ಮೂವರು ಡ್ರಗ್ ಪೆಡ್ಲರ್‌ಗಳ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಖಾಕಿ ಒಳಗಿನ ಮಾನವೀಯತೆ: ಅಪಘಾತಕ್ಕೀಡಾದ ಕಾರಿನಲ್ಲಿದ್ದ ಮಗುವನ್ನು ಎತ್ತಿ ಸುರಕ್ಷಿತ ಸ್ಥಳಕ್ಕೆ ಕರೆತಂದ ವಿಟ್ಲ ಎಸ್‌ಐ!

(ನ್ಯೂಸ್‌ ಕಡಬ) newskadaba.com,  ಜು.20 : ಸೂರಿಕುಮೇರ್ ಪೆಟ್ರೋಲ್ ಬಂಕ್ ಬಳಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿದ ಕಾರು..ಕಾರು ಅಪಘಾತಕ್ಕೀಡಾಗಿ ಒಳಗೆ ಸಿಲುಕಿದ್ದ ಚಾಲಕ, ಮಹಿಳೆ ಮತ್ತು ಮಗುವನ್ನು ವಿಟ್ಲ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣ ಹಾಗೂ ಸಿಬ್ಬಂದಿ ಕರುಣಾಕರ್ ತಕ್ಷಣವೇ ರಕ್ಷಿಸಿದ್ದಾರೆ. ಅಪಘಾತದ ಆಘಾತದಲ್ಲಿದ್ದ ಪುಟ್ಟ ಮಗುವನ್ನು ಎಸ್‌ಐ ರಾಮಕೃಷ್ಣ ಅವರು ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆತಂದ ದೃಶ್ಯ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸದ್ಯ ಈ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು,

ಖಾಕಿ ಒಳಗಿನ ಮಾನವೀಯತೆ: ಅಪಘಾತಕ್ಕೀಡಾದ ಕಾರಿನಲ್ಲಿದ್ದ ಮಗುವನ್ನು ಎತ್ತಿ ಸುರಕ್ಷಿತ ಸ್ಥಳಕ್ಕೆ ಕರೆತಂದ ವಿಟ್ಲ ಎಸ್‌ಐ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮನೆಯಲ್ಲೇ ನೇಣಿಗೆ ಶರಣಾದ ಮಹಿಳೆ; ತನಿಖೆ ಆರಂಭಿಸಿದ ಮೂಡುಬಿದಿರೆ ಪೊಲೀಸ್

(ನ್ಯೂಸ್‌ ಕಡಬ) newskadaba.com,  ಜು.18 :  ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಪ್ಪದ ಕುಮೇರಿವನಲ್ಲಿರುವ ತನ್ನ ಮನೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.ಮೃತರನ್ನು ಮಿಜಾರ್ ಬಳಿಯ ನಮೈಲೆ ನಿವಾಸಿ ಗುರು ಭಟ್ ಅವರ ಪತ್ನಿ स्नेಹಾ ಎಂದು ಗುರುತಿಸಲಾಗಿದೆ. ಇವರು ಪತಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಬಲವಾದ ಅಥವಾ ನಿಖರವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲ.ಮಾಹಿತಿ ತಿಳಿದ ತಕ್ಷಣ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ

ಮನೆಯಲ್ಲೇ ನೇಣಿಗೆ ಶರಣಾದ ಮಹಿಳೆ; ತನಿಖೆ ಆರಂಭಿಸಿದ ಮೂಡುಬಿದಿರೆ ಪೊಲೀಸ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಂದೇ ಮಾತರಂ ಗೀತೆಗೆ ಕಾನೂನು ರಕ್ಷಣೆ: ಕೇಂದ್ರದಿಂದ ಹೊಸ ಮಸೂದೆ ಸಿದ್ಧತೆ

(ನ್ಯೂಸ್‌ ಕಡಬ) newskadaba.com,  ಜು.18  ನವದೆಹಲಿ: ದೇಶಭಕ್ತಿಯ ಸಂಕೇತವಾಗಿರುವ ‘ವಂದೇ ಮಾತರಂ’ ಗೀತೆಗೆ ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜದ ಮಾದರಿಯಲ್ಲೇ ಸಮಾನ ಕಾನೂನು ಸ್ಥಾನಮಾನ ಹಾಗೂ ರಕ್ಷಣೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ಸಂಬಂಧಿತ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಸಿದ್ಧತೆ ನಡೆಸಲಾಗಿದೆ. ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ ಕಾಯ್ದೆ-1971’ಕ್ಕೆ ತಿದ್ದುಪಡಿ ತರಲಾಗುತ್ತಿದ್ದು, ವಂದೇ ಮಾತರಂ ಗೀತೆಗೆ ಅವಮಾನ ಮಾಡಿದರೆ ಅಥವಾ ಹಾಡುವಾಗ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ

ವಂದೇ ಮಾತರಂ ಗೀತೆಗೆ ಕಾನೂನು ರಕ್ಷಣೆ: ಕೇಂದ್ರದಿಂದ ಹೊಸ ಮಸೂದೆ ಸಿದ್ಧತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top