ಖಾಕಿ ಒಳಗಿನ ಮಾನವೀಯತೆ: ಅಪಘಾತಕ್ಕೀಡಾದ ಕಾರಿನಲ್ಲಿದ್ದ ಮಗುವನ್ನು ಎತ್ತಿ ಸುರಕ್ಷಿತ ಸ್ಥಳಕ್ಕೆ ಕರೆತಂದ ವಿಟ್ಲ ಎಸ್‌ಐ!

(ನ್ಯೂಸ್‌ ಕಡಬ) newskadaba.com,  ಜು.20 : ಸೂರಿಕುಮೇರ್ ಪೆಟ್ರೋಲ್ ಬಂಕ್ ಬಳಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿದ ಕಾರು..ಕಾರು ಅಪಘಾತಕ್ಕೀಡಾಗಿ ಒಳಗೆ ಸಿಲುಕಿದ್ದ ಚಾಲಕ, ಮಹಿಳೆ ಮತ್ತು ಮಗುವನ್ನು ವಿಟ್ಲ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣ ಹಾಗೂ ಸಿಬ್ಬಂದಿ ಕರುಣಾಕರ್ ತಕ್ಷಣವೇ ರಕ್ಷಿಸಿದ್ದಾರೆ.

ಅಪಘಾತದ ಆಘಾತದಲ್ಲಿದ್ದ ಪುಟ್ಟ ಮಗುವನ್ನು ಎಸ್‌ಐ ರಾಮಕೃಷ್ಣ ಅವರು ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆತಂದ ದೃಶ್ಯ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸದ್ಯ ಈ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಅಧಿಕಾರಿಯ ಮಾನವೀಯತೆ ಮತ್ತು ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಸಕಾಲದಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯಿಂದಾಗಿ ಕಾರಿನಲ್ಲಿದ್ದ ಮೂವರೂ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Scroll to Top