(ನ್ಯೂಸ್ ಕಡಬ) newskadaba.com, ಜು.18 : ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಪ್ಪದ ಕುಮೇರಿವನಲ್ಲಿರುವ ತನ್ನ ಮನೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.ಮೃತರನ್ನು ಮಿಜಾರ್ ಬಳಿಯ ನಮೈಲೆ ನಿವಾಸಿ ಗುರು ಭಟ್ ಅವರ ಪತ್ನಿ स्नेಹಾ ಎಂದು ಗುರುತಿಸಲಾಗಿದೆ. ಇವರು ಪತಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಆತ್ಮಹತ್ಯೆಗೆ ಬಲವಾದ ಅಥವಾ ನಿಖರವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲ.ಮಾಹಿತಿ ತಿಳಿದ ತಕ್ಷಣ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.









