ಸುಪ್ರೀಂ ಕೋರ್ಟ್ ಆದೇಶ: ಭಾರತದಲ್ಲಿ ‘ಗಲ್ಲಿಗೇರಿಸುವ’ ಶಿಕ್ಷಾ ಪದ್ಧತಿ ಮುಂದುವರಿಕೆ



(ನ್ಯೂಸ್‌ ಕಡಬ) newskadaba.com,  ಆ.19: ಭಾರತದಲ್ಲಿ ಮರಣದಂಡನೆ ಶಿಕ್ಷೆಗೆ ಪ್ರಸ್ತುತ ಜಾರಿಯಲ್ಲಿರುವ ‘ಗಲ್ಲಿಗೇರಿಸುವ’ ಪದ್ಧತಿಯು ಸಂವಿಧಾನಬದ್ಧವಾಗಿದ್ದು, ಅದನ್ನೇ ಮುಂದುವರಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.ಗಲ್ಲಿಗೇರಿಸುವ ಬದಲಿಗೆ ಮಾರಣಾಂತಿಕ ಇಂಜೆಕ್ಷನ್ ಅಥವಾ ಶೂಟಿಂಗ್‌ನಂತಹ ಕಡಿಮೆ ನೋವಿನ ಪರ್ಯಾಯ ವಿಧಾನಗಳನ್ನು ಬಳಸಬೇಕೆಂದು ವಕೀಲ ರಿಷಿ ಮಲ್ಹೋತ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ವಜಾಗೊಳಿಸಿದೆ.







ಗಲ್ಲಿಗೇರಿಸುವಿಕೆ ಕ್ರೂರವಾಗಿದ್ದು, ವ್ಯಕ್ತಿಯ ಸಾವು ಖಚಿತವಾಗಲು 40 ನಿಮಿಷ ಬೇಕಾಗುತ್ತದೆ. ಆದರೆ ಇಂಜೆಕ್ಷನ್ ಅಥವಾ ಶೂಟಿಂಗ್ ವಿಧಾನಗಳಲ್ಲಿ 5 ನಿಮಿಷದಲ್ಲೇ ಸಾವು ಸಂಭವಿಸುತ್ತದೆ ಎಂಬುದು ಅವರ ವಾದವಾಗಿತ್ತು.






ಮಾರಣಾಂತಿಕ ಇಂಜೆಕ್ಷನ್ ಗಲ್ಲಿಗೇರಿಸುವುದಕ್ಕಿಂತ ಕಡಿಮೆ ನೋವು ನೀಡುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ. ಆದಾಗ್ಯೂ, ಭವಿಷ್ಯದಲ್ಲಿ ಹೊಸ ವೈಜ್ಞಾನಿಕ ಸಾಕ್ಷ್ಯಾಧಾರಗಳು ದೊರೆತರೆ ಈ ವಿಷಯವನ್ನು ಮರುಪರಿಶೀಲಿಸಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ

error: Content is protected !!
Scroll to Top