ಬ್ರೇಕಿಂಗ್ ನ್ಯೂಸ್

ಆನ್‌ಲೈನ್ ಗೇಮಿಂಗ್ ಚಟಕ್ಕೆ ನರ್ಸಿಂಗ್ ವಿದ್ಯಾರ್ಥಿ ಬಲಿ: ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ!

(ನ್ಯೂಸ್‌ ಕಡಬ) newskadaba.com,  ಜು.18  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಮಾರಪ್ಪನಪಾಳ್ಯದಲ್ಲಿ 20 ವರ್ಷದ ನರ್ಸಿಂಗ್ ವಿದ್ಯಾರ್ಥಿ ತನ್ನ ಮನೆಯ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ  ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದು, ಜೊತೆಗೆ ಬಾಟಾ ಶೋರೂಂನಲ್ಲಿ ಪಾರ್ಟ್‌ ಟೈಂ ಕೆಲಸ ನಿರ್ವಹಿಸುತ್ತಿದ್ದ.ಮನೆಯ ಮೇಲ್ಭಾಗದ ಪ್ರತ್ಯೇಕ ಕೊಠಡಿಯಲ್ಲಿದ್ದ ಮೂರು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ. ಕೊಠಡಿಯಿಂದ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. […]

ಆನ್‌ಲೈನ್ ಗೇಮಿಂಗ್ ಚಟಕ್ಕೆ ನರ್ಸಿಂಗ್ ವಿದ್ಯಾರ್ಥಿ ಬಲಿ: ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಗಾರದ ಬೆಲೆಯಲ್ಲಿ ಭಾರೀ ಹೆಚ್ಚಳ

(ನ್ಯೂಸ್‌ ಕಡಬ) newskadaba.com,  ಜು.18 22 ಕ್ಯಾರಟ್ ಚಿನ್ನ (ಆಭರಣದ ಚಿನ್ನ): ಪ್ರತಿ 1 ಗ್ರಾಂಗೆ ₹70 ಏರಿಕೆಯಾಗಿ ₹13,135 ತಲುಪಿದೆ.8 ಗ್ರಾಂ (1 ಪವನ್): ₹1,05,080 ,10 ಗ್ರಾಂ: ₹1,31,350 ,100 ಗ್ರಾಂ: ₹13,13,500 24 ಕ್ಯಾರಟ್ ಚಿನ್ನ : ಪ್ರತಿ 1 ಗ್ರಾಂಗೆ ₹76 ಏರಿಕೆಯಾಗಿ ₹14,329 ತಲುಪಿದೆ. 8 ಗ್ರಾಂ: ₹1,14,632 10 ಗ್ರಾಂ: ₹1,43,290 100 ಗ್ರಾಂ: ₹14,32,900

ಬಂಗಾರದ ಬೆಲೆಯಲ್ಲಿ ಭಾರೀ ಹೆಚ್ಚಳ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಜೇಶ್ವರದ ವೀರ ಮಾರುತಿ ವ್ಯಾಯಾಮ ಶಾಲೆಯಲ್ಲಿ ಕಳ್ಳತನ: ತನಿಖೆ ಆರಂಭಿಸಿದ ಪೊಲೀಸರು

(ನ್ಯೂಸ್‌ ಕಡಬ) newskadaba.com,  ಜು.18 ಮಂಜೇಶ್ವರ: ಇಲ್ಲಿನ ಉದ್ಯಾವರ ಮಾಡ ಶ್ರೀ ಅರಸು ಕೃಪಾ ವೀರ ಮಾರುತಿ ವ್ಯಾಯಾಮ ಶಾಲೆಯ ಮುಖ್ಯ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಕಾಣಿಕೆ ಡಬ್ಬಿಯಲ್ಲಿದ್ದ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ.ವ್ಯಾಯಾಮ ಶಾಲೆಯಲ್ಲಿ ನಡೆಯಲಿದ್ದ ಪೂಜೆಯ ಸಿದ್ಧತೆಗಳಿಗಾಗಿ ಶನಿವಾರ ಮುಂಜಾನೆ 5 ಗಂಟೆಗೆ ಪದಾಧಿಕಾರಿಯೊಬ್ಬರು ಆಗಮಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳರು ಕಬ್ಬಿಣದ ರಾಡ್ ಬಳಸಿ ಮುಖ್ಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿದ್ದಾರೆ.

ಮಂಜೇಶ್ವರದ ವೀರ ಮಾರುತಿ ವ್ಯಾಯಾಮ ಶಾಲೆಯಲ್ಲಿ ಕಳ್ಳತನ: ತನಿಖೆ ಆರಂಭಿಸಿದ ಪೊಲೀಸರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಂಪಾಜೆ: ಕೃಷ್ಣ ಭಕ್ತಿಯ ಬಂಧ; ಅಮೆರಿಕನ್ ಯುವತಿ ಜೊತೆ ಸುಳ್ಯದ ಯುವಕನ ಸಾಂಪ್ರದಾಯಿಕ ವಿವಾಹ

(ನ್ಯೂಸ್‌ ಕಡಬ) newskadaba.com,  ಜು.18 ಸುಳ್ಯ: ಶ್ರೀಕೃಷ್ಣನ ಮೇಲಿನ ಭಕ್ತಿ ಹಾಗೂ ಭಾರತೀಯ ಸಂಸ್ಕೃತಿಯ ಮೇಲಿನ ಒಲವು ಅಮೆರಿಕದ ಯುವತಿ ಮತ್ತು ಸುಳ್ಯದ ಯುವಕನನ್ನು ವೈವಾಹಿಕ ಜೀವನಕ್ಕೆ ಒಪ್ತಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇವರ ಸಾಂಪ್ರದಾಯಿಕ ಹಿಂದೂ ವಿವಾಹ ಸಂಪನ್ನಗೊಂಡಿದೆ. ಸುಳ್ಯ ತಾಲೂಕಿನ ಗೂನಡ್ಕ ಬೀಜದಕಟ್ಟೆಯ ಬಿ.ಕೆ. ಕೇಶವ ಅವರ ಪುತ್ರ ಸಾಯಿ ಸಂಕೇತ್ ಮತ್ತು ಅಮೆರಿಕದ ಚಿಕಾಗೋ ನಗರದ ಡಾ. ಚಾರ್ಲ್ಸ್ ಅವರ ಪುತ್ರಿ ಶಾನೋನ್ ಹಸೆಮಣೆ ಏರಿದ

ಸಂಪಾಜೆ: ಕೃಷ್ಣ ಭಕ್ತಿಯ ಬಂಧ; ಅಮೆರಿಕನ್ ಯುವತಿ ಜೊತೆ ಸುಳ್ಯದ ಯುವಕನ ಸಾಂಪ್ರದಾಯಿಕ ವಿವಾಹ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆತ್ಮಹತ್ಯೆಗೆ ಯತ್ನಿಸಿದ್ದ ಕಮ್ಯೂನಿಟಿ ಹೆಲ್ತ್ ಆಫೀಸರ್ ಕೊನೆಯುಸಿರು: ಪೊಲೀಸರಿಂದ ತನಿಖೆ ಚುರುಕು

(ನ್ಯೂಸ್‌ ಕಡಬ) newskadaba.com,  ಜು.18 ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಕಮ್ಯೂನಿಟಿ ಹೆಲ್ತ್ ಆಫೀಸರ್ ಪ್ರಜ್ಞಾ (26) ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೆಟ್ಟಂಪಾಡಿ ಮಿತ್ತಡ್ಕ ನಿವಾಸಿಯಾದ ಇವರು ಈಶ್ವರಮಂಗಲದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯಾಗಿ (CHO) ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲವು ದಿನಗಳ ಹಿಂದೆ ವಿಷ ಸೇವಿಸಿದ್ದ ಪ್ರಜ್ಞಾ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ್ದ ಕಮ್ಯೂನಿಟಿ ಹೆಲ್ತ್ ಆಫೀಸರ್ ಕೊನೆಯುಸಿರು: ಪೊಲೀಸರಿಂದ ತನಿಖೆ ಚುರುಕು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಶಾಲಾ ಮಕ್ಕಳ ಹಾಜರಾತಿಗಾಗಿ ಹಳೆ ವಿದ್ಯಾರ್ಥಿಯಿಂದ ಅತ್ಯಾಧುನಿಕ ‘ಸೂಪರ್ ಬಯೋಮೆಟ್ರಿಕ್’ ವ್ಯವಸ್ಥೆ ಅಭಿವೃದ್ಧಿ

(ನ್ಯೂಸ್‌ ಕಡಬ) newskadaba.com,  ಜು.18 ಪುತ್ತೂರು: ಶಾಲಾ ಮಕ್ಕಳ ಸುರಕ್ಷತೆಯನ್ನು ಬಲಪಡಿಸುವ ಮತ್ತು ವಿದ್ಯಾರ್ಥಿಗಳು ತರಗತಿ ತಪ್ಪಿಸುವುದನ್ನು ತಡೆಯುವ ಉದ್ದೇಶದಿಂದ, ಕೊಂಬೆಟ್ಟು ಸರ್ಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಅರುಣ್ ಕುಮಾರ್ ಅತ್ಯಾಧುನಿಕ ‘ಸೂಪರ್ ಬಯೋಮೆಟ್ರಿಕ್’ ಹಾಜರಾತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ವಿದ್ಯಾರ್ಥಿಗಳು ಶಾಲಾ ಆವರಣಕ್ಕೆ ಆಗಮಿಸಿ, ಕ್ಯಾಮೆರಾ ಮತ್ತು ಬಯೋಮೆಟ್ರಿಕ್ ಮೂಲಕ ಹಾಜರಾತಿ ದಾಖಲಿಸುತ್ತಿದ್ದಂತೆಯೇ ಅವರ ಪೋಷಕರ ಮೊಬೈಲ್‌ಗೆ ಸ್ವಯಂಚಾಲಿತವಾಗಿ ಸಂದೇಶ (SMS) ರವಾನೆಯಾಗುತ್ತದೆ. ಅಟಲ್ ಟಿಂಕರಿಂಗ್ ಲ್ಯಾಬ್ ನೆರವಿನೊಂದಿಗೆ, ರಾಸ್ಪ್‌ಬೆರಿ ಪೈ 5 ಪ್ರೊಸೆಸರ್ ಬಳಸಿ ಸುಮಾರು

ಪುತ್ತೂರು: ಶಾಲಾ ಮಕ್ಕಳ ಹಾಜರಾತಿಗಾಗಿ ಹಳೆ ವಿದ್ಯಾರ್ಥಿಯಿಂದ ಅತ್ಯಾಧುನಿಕ ‘ಸೂಪರ್ ಬಯೋಮೆಟ್ರಿಕ್’ ವ್ಯವಸ್ಥೆ ಅಭಿವೃದ್ಧಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆಗಸ್ಟ್ 15ರ ವರೆಗೆ ಕೆಂಪುಕೋಟೆಗೆ ಸಾರ್ವಜನಿಕ ಪ್ರವೇಶ ನಿರ್ಬಂಧ

(ನ್ಯೂಸ್ ಕಡಬ) newskadaba.com ಜು. 17. ರಾಷ್ಟ್ರರಾಜಧಾನಿ ಹೊಸದಿಲ್ಲಿಯ ಐತಿಹಾಸಿಕ ಕೆಂಪುಕೋಟೆ ಸಂಕೀರ್ಣವನ್ನು ಆಗಸ್ಟ್ 15ರ ವರೆಗೆ ಸಾರ್ವಜನಿಕರಿಗೆ ಮುಚ್ಚಲಾಗಿದೆ. ಕೆಂಪುಕೋಟೆ ಸಂಕೀರ್ಣದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಪೂರ್ವಸಿದ್ದತೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಈ ಆದೇಶವನ್ನು ಹೊರಡಿಸಿದೆ. ಪುರಾತನ ಸ್ಮಾರಕಗಳು ಹಾಗೂ ಪುರಾತತ್ವ ತಾಣಗಳು ಮತ್ತು ಪಳೆಯುಳಿಕೆಗಳ ಕಾನೂನುಗಳು, 1959ರ ನಿಯಮ 5ರಡಿ ಪ್ರದತ್ತವಾದ ಅಧಿಕಾರಗಳನ್ನು ಬಳಸಿಕೊಂಡು ಈ ಆದೇಶವನ್ನು ಹೊರಡಿಸಲಾಗಿದೆ ಎಂದು ASI ಪ್ರಕಟಣೆ ತಿಳಿಸಿದೆ.

ಆಗಸ್ಟ್ 15ರ ವರೆಗೆ ಕೆಂಪುಕೋಟೆಗೆ ಸಾರ್ವಜನಿಕ ಪ್ರವೇಶ ನಿರ್ಬಂಧ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಳಂಭಿಸದೆ ಫಾರಂ ಹಿಂದಿರುಗಿಸಿ: ಮತದಾರರಿಗೆ ಡಿ.ಸಿ. ಸೂಚನೆ

(ನ್ಯೂಸ್ ಕಡಬ) newskadaba.com ಜು. 16  : ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 18,03,766 ಮತದಾರರ  ಪೈಕಿ 17,86,112 ಅಂದರೆ   ಶೇ. 99.02% ಮತದಾರರಿಗೆ ಎನ್ಯುಮರೇಶನ್ ಫಾರ್ಮ್‍ಗಳನ್ನು  ತಲುಪಿಸಲಾಗಿರುತ್ತದೆ. ಜುಲೈ 29  ಎನ್ಯುಮರೇಶನ್ ಫಾರ್ಮ್‍ಗಳ ಡಿಜಿಟೈಸೇಶನ್‍ಗೆ  ಕೊನೆಯ ದಿನವಾಗಿರುವುದರಿಂದ ಮತದಾರರು ಆದಷ್ಟು ಬೇಗ ಎನ್ಯುಮರೇಶನ್ ಫಾರ್ಮ್‍ಗಳನ್ನು  ಭರ್ತಿ ಮಾಡಿ ಬಿ.ಎಲ್.ಒ ರವರು ಮನೆಗೆ ಬಂದಾಗ ವಿಳಂಬ ಮಾಡದೇ ನೀಡಬೇಕು. ಬಿ.ಎಲ್.ಒ ರವರು ಮತದಾರರಿಂದ ಸ್ವೀಕೃತವಾಗುವ ಎನ್ಯುಮರೇಶನ್ ಫಾರ್ಮ್‍ಗಳನ್ನು  ಬಿ.ಎಲ್.ಒ  ಆ್ಯಪ್‍ನಲ್ಲಿ ಡಿಜಿಟೈಸೇಶನ್ ಮಾಡಲು ಕನಿಷ್ಠ 2 ರಿಂದ 4

ವಿಳಂಭಿಸದೆ ಫಾರಂ ಹಿಂದಿರುಗಿಸಿ: ಮತದಾರರಿಗೆ ಡಿ.ಸಿ. ಸೂಚನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗೃಹಲಕ್ಷ್ಮಿ: ತಾಂತ್ರಿಕ ದೋಷಗಳನ್ನು ಸರಿಪಡಿಸಲು* ಗ್ಯಾರಂಟಿ ಜಿಲ್ಲಾಧ್ಯಕ್ಷರ ಸೂಚನೆ

(ನ್ಯೂಸ್ ಕಡಬ) newskadaba.com ಜು. 16  : ತಾಂತ್ರಿಕ ದೋಷದಿಂದಾಗಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಜೀವಂತವಾಗಿದ್ದರೂ ಮೃತ ಎಂದು ತೋರಿಸುವ ಸಮಸ್ಯೆಗಳಾಗುತ್ತಿದ್ದು,  ಹಲವು ತಿಂಗಳಿನಿಂದ ಸಮಸ್ಯೆ ಬಗೆಹರಿದಿರುವುದಿಲ್ಲ. ಇಂತಹ ಸಮಸ್ಯೆಗಳನ್ನು  ಗಂಭೀರವಾಗಿ ಪರಿಗಣಿಸುವಂತೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದ್ದಾರೆ.ಅವರು ಬುಧವಾರ ದ.ಕ ಜಿಲ್ಲಾ ಪಂಚಾಯತ್‍ನಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ  ಯೋಜನೆಗಳ ಅನುμÁ್ಟನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮೃತಪಟ್ಟ ಫಲಾನುಭವಿಗಳ ನಿಖರ

ಗೃಹಲಕ್ಷ್ಮಿ: ತಾಂತ್ರಿಕ ದೋಷಗಳನ್ನು ಸರಿಪಡಿಸಲು* ಗ್ಯಾರಂಟಿ ಜಿಲ್ಲಾಧ್ಯಕ್ಷರ ಸೂಚನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಳ್ಳಾಲ ನಗರಸಭೆ: ಕಟ್ಟಡ ಲೈಸನ್ಸ್ಗೆB ಹೊಸ ಸಾಫ್ಟ್ವೇಿರ್

(ನ್ಯೂಸ್ ಕಡಬ) newskadaba.com ಜು. 16  : ಉಳ್ಳಾಲ ನಗರಸಭೆಗೆ ಸಂಬಂಧಿಸಿದ ಕಟ್ಟಡ ಪರವಾನಿಗೆಗೆ ULMS (Unified Land Management System) ಎಂಬ ಹೊಸ ತಂತ್ರಾಂಶವನ್ನು ಉಪಯೋಗಿಸುತ್ತಿದ್ದು ತಂತ್ರಾಂಶದಲ್ಲಿದ್ದ ನ್ಯೂನ್ಯತೆಗಳನ್ನು ಈಗಾಗಲೇ ಸರಿಪಡಿಸಲಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ಮತ್ತು ಕಟ್ಟಡ ನಿರ್ಮಾಣದ ಎಂಜಿನಿಯರ್ಸ್‍ರವರು ULMS ತಂತ್ರಾಂಶದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಉಳ್ಳಾಲ ನಗರಸಭೆ ಪೌರಾಯುಕ್ತರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಳ್ಳಾಲ ನಗರಸಭೆ: ಕಟ್ಟಡ ಲೈಸನ್ಸ್ಗೆB ಹೊಸ ಸಾಫ್ಟ್ವೇಿರ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top