ಕಾಸರಗೋಡು: ಪೆರ್ಮುದೆ ಬಳಿ ಸ್ಕೂಟರ್-ಬೈಕ್ ಡಿಕ್ಕಿ- ಮಗ ಮೃತ್ಯು, ತಂದೆಗೆ ಗಂಭೀರ ಗಾಯ



(ನ್ಯೂಸ್‌ ಕಡಬ) newskadaba.com,  ಮೇ.28: :ಸ್ಕೂಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದು, ಆತನ ತಂದೆ ಗಂಭೀರವಾಗಿ ಗಾಯಗೊಂಡ ಘಟನೆ ಮೇ 28 ರ ಗುರುವಾರ ಬೆಳಿಗ್ಗೆ ಪೆರ್ಮುದೆ ಬಳಿಯ ಪೆರಿಯಡ್ಕದಲ್ಲಿ ನಡೆದಿದೆ.







ಮೃತರನ್ನು ಸ್ಕೂಟರ್ ಸವಾರಿ ಮಾಡುತ್ತಿದ್ದ ಬಾಯಾರು ನೆತ್ತರಗುಳಿ ನಿವಾಸಿ ಎನ್. ಕಿಶನ್ (24) ಎಂದು ಗುರುತಿಸಲಾಗಿದ್ದು, ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದ ಅವರ ತಂದೆ ಮಾಧವ ದೇವಾಡಿಗ ಡಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.






ವರದಿಗಳ ಪ್ರಕಾರ, ಎದುರುಗಡೆಯಿಂದ ಬರುತ್ತಿದ್ದ ಬೈಕ್ ಕಿಶನ್ ಸವಾರಿ ಮಾಡುತ್ತಿದ್ದ ಸ್ಕೂಟರ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ, ತೀವ್ರವಾಗಿ ಗಾಯಗೊಂಡಿದ್ದ ತಂದೆಯನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು.

error: Content is protected !!
Scroll to Top