ಕಾಲೇಜು ಆವರಣದಲ್ಲಿ ಸ್ನೇಹಿತೆಯನ್ನು ಗುಂಡಿಟ್ಟು ಕೊಂದ ಸ್ನೇಹಿತ.!

(ನ್ಯೂಸ್ ಕಡಬ)newskadaba.com ನವದೆಹಲಿ,ಮೇ.20 ಕಾಲೇಜು ಆವರಣದಲ್ಲೇ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತೆಯನ್ನೇ ಅಪ್ಪಿ, ಆಕೆಗೇ ಗುಂಡಿಟ್ಟು ಹತ್ಯೆಗೈದು, ಬಳಿಕ ತಾನೂ ಗುಂಡುಹಾರಿಸಿಕೊಂಡು ಮೃತ ಪಟ್ಟಿ ರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ನೋಯ್ಡಾದ ಶಿವನಾಡರ್‌ ವಿ.ವಿ. ಆವರಣದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಮಾಜ ಶಾಸ್ತ್ರ ವಿಭಾಗದ ವಿದ್ಯಾರ್ಥಿಯಾಗಿದ್ದ ಅನುಜ್‌ ಎಂಬಾತ ತನ್ನದೇ ತರಗತಿಯ ವಿದ್ಯಾ ರ್ಥಿನಿ ಜತೆಗೆ ಆಪ್ತವಾಗಿದ್ದ. ಯಾವುದೋ ವಿಚಾರಕ್ಕಾಗಿ ಮನಸ್ತಾಪವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆಕೆಯನ್ನು ಅಪ್ಪಿಕೊಂಡ ಯುವಕ ತಕ್ಷಣವೇ ಗುಂಡಿಟ್ಟು ಹತ್ಯೆಗೈದಿದ್ದಾನೆ. ಬಳಿಕ ಹಾಸ್ಟೆಲ್‌ಗೆ ತೆರಳಿ ತಾನೂ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಕೇಸು ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

 

 

Scroll to Top