ಐವರು ಶಾಲಾ ಮಕ್ಕಳ ಮೇಲೆ ಹರಿದ ಕಾರ್ ➤ ಸ್ಥಳದಲ್ಲೇ ಮೂವರು ಮೃತ್ಯು..!

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಮೇ.12. ನಿಯಂತ್ರಣ ತಪ್ಪಿದ ಕಾರ್​ ಒಂದು ರಸ್ತೆ ಬದಿಯಲ್ಲಿ ಶಾಲಾ ಬಸ್‌ ಗಾಗಿ ಕಾಯುತ್ತಿದ್ದ ಮಕ್ಕಳಿಗೆ ಡಿಕ್ಕಿ ಹೊಡೆದಿರುವ ಘಟನೆ ಆಗ್ರ ಜಿಲ್ಲೆಯ ದೌಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಸ್ತೆ ಅಪಘಾತದಲ್ಲಿ ಮೂವರು ಅಮಾಯಕ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿವೆ. ಇನ್ನು ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ರಸ್ತೆ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು.

 

Scroll to Top