ಪರಿವರ್ತನಾ ಸುದ್ದಿ ಸಂಪಾದಕ ಜನಾರ್ದನ ಪುರಿಯ ನಿಧನ ➤ ಮುಂಬಯಿನಲ್ಲಿ ನೆಲೆ ಕಂಡುಕೊಂಡಿದ್ದ ಕಡಬ ನಿವಾಸಿ

(ನ್ಯೂಸ್ ಕಡಬ) newskadaba.com ಕಡಬ, ಆ.28. ಪರಿವರ್ತನಾ ಸುದ್ದಿ ಮಾಸಿಕ ಪತ್ರಿಕೆಯ ಸಂಪಾದಕ ಮೂಲತಃ ಕಡಬ ತಾಲೂಕು ಕುಟ್ರುಪಾಡಿ ಗ್ರಾಮದ ಪುರಿಯ ನಿವಾಸಿ, ಪ್ರಸ್ತುತ ಮುಂಬಯಿನಲ್ಲಿ ನೆಲೆಸಿದ್ದ ಜನಾರ್ದನ ಪುರಿಯ ಅವರು ಶನಿವಾರದಂದು ನಿಧನ ಹೊಂದಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮುಂಬಯಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆ ಬಳಿಕ ಪುತ್ರಿಯ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ರಾತ್ರಿ ಕೊನೆಯಸಿರುಳೆದಿದ್ದಾರೆ ಎಂದು ತಿಳಿದು ಬಂದಿದೆ. ಇವರು ಪತ್ನಿ ಪ್ರೇಮ, ಪುತ್ರ ಪ್ರತೀಕ್, ಪುತ್ರಿ ಪ್ರಿಯಾಂಕ ಅವರನ್ನು ಅಗಲಿದ್ದಾರೆ.

 

 

 

Scroll to Top