(ನ್ಯೂಸ್ ಕಡಬ) newskadaba.com ಜು.29 ಬೆಂಗಳೂರು: ಹೆಚ್ಎಸ್ಆರ್ ಲೇಔಟ್ನ 6ನೇ ಸೆಕ್ಟರ್ನಲ್ಲಿರುವ ಐಪಿಎಸ್ ಲೇಔಟ್ನ ವಿಲ್ಲಾವೊಂದರಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಅಡ್ಡೆ ಮೇಲೆ ಸಿಸಿಬಿ ಮಹಿಳಾ ಘಟಕದ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಬಂಧಿತ ಆರೋಪಿಗಳು ದೀಕ್ಷಿತ್, ವೇದಾಂತ್ ಪಂಡಿತ್ ಮತ್ತು ಶಂಕರ್.
‘ರೆವ್ ಕೀ ಹಾಸ್ಪಿಟಾಲಿಟಿ ಸರ್ವಿಸ್’ ವಿಲ್ಲಾವನ್ನು ದಿನಕ್ಕೆ ₹20,000 ಬಾಡಿಗೆಗೆ ಪಡೆದು ಪಾರ್ಟಿ ಆಯೋಜಿಸಲಾಗಿತ್ತು. ‘ಅಮಿಗೋಸ್’ ಆಪ್ ಬಳಸಿ ಯುವಕ-ಯುವತಿಯರನ್ನು ಕರೆಯಿಸಲಾಗಿತ್ತು. ಪ್ರವೇಶ ಶುಲ್ಕವಾಗಿ ಯುವಕರಿಗೆ ₹1,099 ಹಾಗೂ ಯುವತಿಯರಿಗೆ ₹499 ವಸೂಲಿ ಮಾಡಲಾಗಿತ್ತು.
ದಾಳಿ ವೇಳೆ ನಿಷೇಧಿತ ಹುಕ್ಕಾ, ಇ-ಸಿಗರೇಟ್ ಹಾಗೂ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.ಪಾರ್ಟಿಯಲ್ಲಿದ್ದ ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದು, ವಿಲ್ಲಾ ಮಾಲೀಕರ ವಿರುದ್ಧ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









