(ನ್ಯೂಸ್ ಕಡಬ) newskadaba.com ಜು. 29. ಕಡಬ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆ ಮತ್ತು ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಕಡಬ ತಾಲೂಕು ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ‘ದಾಸ ಸಾಹಿತ್ಯ ಎಂಬ ಜೀವನ ಮೌಲ್ಯಗಳ ಗಣಿ ಎನ್ನುವ ಉಪನ್ಯಾಸ ಕಾರ್ಯಕ್ರಮವು ಜುಲೈ 29ರ ಬುಧವಾರದಂದು ಕೇವಳ ಹನುಮಾನ್ ನಗರದ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಐ.ಡಿ.ಎಸ್.ಜಿ ಸರಕಾರಿ ಕಾಲೇಜು ಚಿಕ್ಕಮಗಳೂರು ಇಲ್ಲಿಯ ಸಹಾಯಕ ಪ್ರಾಧ್ಯಾಪಕರು, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಶ್ರೀ ಗಣೇಶ ಶೆಂಡ್ಯೆ ಆಗಮಿಸಿ, ದಾಸ ಸಾಹಿತ್ಯ ಎಷ್ಟು ವಿಶಾಲತೆಯನ್ನು ಹೊಂದಿದೆ ಅದರ ತಾತ್ಪರ್ಯ ಏನು ಎಂಬುದನ್ನು ಅತ್ಯಂತ ಅದ್ಭುತವಾಗಿ ದೃಷ್ಟಾಂತಗಳ ಮೂಲಕ ವರ್ಣಿಸಿದರು. ನಿಜವಾಗಿಯೂ ದಾಸ ಸಾಹಿತ್ಯ ಅವರ ಮಾತಿನಿಂದ ಜೀವನದ ಗಣಿ ಎಂಬುವುದು ಕಾರ್ಯಕ್ರಮದಲ್ಲಿ ಸಾಕ್ಷೀಕರಣಗೊಂಡಿತ್ತು. ಇನ್ನೋರ್ವ ಅತಿಥಿ ಶ್ರೀ ಕರುಣಾಕರ ಗೋಗಟೆ ಅಧ್ಯಕ್ಷರು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಡಬ ತಾಲೂಕು ಸಮಿತಿ ಇವರು ಮಾತನಾಡಿ ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಶ್ರೀ ಸದಾಶಿವ ಭಟ್ ವಹಿಸಿ ಮಕ್ಕಳು ಕೇವಲ ಪಠ್ಯಪುಸ್ತಕದ ವಿಷಯಗಳಿಗೆ ಮಾತ್ರ ಸೀಮಿತವಾಗಿರದೆ ಇತರ ವಿಷಯಗಳ ಬಗ್ಗೆ ಜ್ಞಾನವನ್ನು ಹೊಂದಿರಬೇಕು ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಡಬ ತಾಲೂಕು ಸಮಿತಿ ಇದರ ಕಾರ್ಯದರ್ಶಿ ಶ್ರೀ ನಾಗರಾಜ್ ಎನ್.ಕೆ, ಸರಸ್ವತೀ ವಿದ್ಯಾಲಯ ಕನ್ನಡ ಮಾಧ್ಯಮ ವಿಭಾಗದ ಸಂಚಾಲಕಿ ಶ್ರೀಮತಿ ಸವಿತಾ ಶಿವಸುಬ್ರಹ್ಮಣ್ಯ ಭಟ್, ಸರಸ್ವತೀ ಆಂಗ್ಲ ಮಾಧ್ಯಮ ವಿಭಾಗದ ಸಂಚಾಲಕರಾದ ಶ್ರೀ ಅಜಿತ್ ರೈ.ಎ, ಸರಸ್ವತೀ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕ ಶ್ರೀ ವಸಂತ ಕೆ, ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶೈಲಶ್ರೀ.ರೈ.ಎಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ವಸುಧಾ ಗೋಗಟೆ, ಶ್ರೀ ಕಾಶಿನಾಥ್ ಗೋಗಟೆ, ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸರಸ್ವತೀ ಆಂಗ್ಲ ಮಾಧ್ಯಮ ವಿಭಾಗದ 10ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಪೂರ್ವಿ ಸ್ವಾಗತಿಸಿ, ಕನ್ನಡ ಮಾಧ್ಯಮ ವಿಭಾಗದ 10ನೇ ತರಗತಿಯ ವಿದ್ಯಾರ್ಥಿ ಯಕ್ಷಿತ್ ವಂದಿಸಿದರು. ಶಿಕ್ಷಕಿ ಶ್ರೀಮತಿ ಸೌಮ್ಯಕೆ.ಎ ಕಾರ್ಯಕ್ರಮ ನಿರೂಪಿಸಿದರು.









