ಮದುವೆಗೆ ಒತ್ತಾಯಿಸಿದ ಮಗನನ್ನೇ ಕೊಂದ ತಂದೆ..!



(ನ್ಯೂಸ್ ಕಡಬ) newskadaba.com ಹೈದರಾಬಾದ್, ಜ. 18. ಮದುವೆ ಮಾಡುವಂತೆ ಒತ್ತಾಯಿಸಿದ ಮಗನನ್ನೇ ತಂದೆ ಕೊಡಲಿಯಿಂದ ಕೊಚ್ಚಿ ಕೊಂದ ಘಟನೆ ಹೈದರಾಬಾದ್ ರಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.





ಕೊಲೆಯಾದವರನ್ನು ನರೇಶ್ ಎಂಸು ಗುರುತಿಸಲಾಗಿದೆ. ಎಲ್ಲಯ್ಯ ಮಗನನ್ನು ಕೊಂದ ಆರೋಪಿ ತಂದೆ. ಮಗನು ಮದುವೆಯಾಗುವಂತೆ ಪ್ರತೀ ನಿತ್ಯ ಹಿಂಸೆ ಮಾಡುತ್ತಾನೆ, ಈ ವಿಷಯದಲ್ಲಿ ತಂದೆ-ಮಗನಿಗೆ ದಿನಾಲೂ ಜಗಳವಾಗುತ್ತಿತ್ತು. ಶನಿವಾರದಂದು ಸಂಜೆ ಈ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆಯಾಗಿದ್ದು, ಈ ವೇಳೆ ಸಿಟ್ಟಿನಿಂದ ಹತ್ತಿರದಲ್ಲಿದ್ದ ಕೊಡಲಿಯಿಂದ ಬಲವಾಗಿ ಹೊಡೆದಿದ್ದಾನೆ. ಹೊಡೆತಕ್ಕೆ ಗಂಭೀರ ಗಾಯಗೊಂಡ ನರೇಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ತಂದೆಯ ವಿರುದ್ದ ದೂರು ದಾಖಲಾಗಿದೆ.






error: Content is protected !!
Scroll to Top