ಮಂಗಳೂರು: 4 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ; ಸಂಚಾರ ಪೊಲೀಸರಿಂದ ವಿಶೇಷ ಜಾಗೃತಿ ಅಭಿಯಾನ



(ನ್ಯೂಸ್‌ ಕಡಬ) newskadaba.com,  ಜೂ.16 ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ, ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ 4 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ನಿಯಮದ ಕುರಿತು ಮಂಗಳೂರು ಸಂಚಾರ ಪೊಲೀಸರು ನಗರದಲ್ಲಿ ಮತ್ತೊಮ್ಮೆ ವಿಶೇಷ ಜಾಗೃತಿ ಅಭಿಯಾನವನ್ನು ಆರಂಭಿಸಿದ್ದಾರೆ..







4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಹೆಲ್ಮೆಟ್ ಜೊತೆಗೆ ಸವಾರರ ದೇಹಕ್ಕೆ ಜೋಡಿಸುವ ‘ಸುರಕ್ಷತಾ ಬೆಲ್ಟ್’ ಬಳಸಲು ಸೂಚಿಸಲಾಗಿದೆ.ನಿಯಮ ಉಲ್ಲಂಘಿಸಿದರೆ ₹500 ರಿಂದ ₹1,000 ವರೆಗೆ ದಂಡ ಮತ್ತು ಚಾಲನಾ ಪರವಾನಗಿ (DL) ಅಮಾನತುಗೊಳಿಸುವ ಅವಕಾಶವಿದೆ.






ಶಾಲೆ ಹತ್ತಿರವಿದ್ದರೂ ಹೆಲ್ಮೆಟ್ ನಿರ್ಲಕ್ಷಿಸುವುದು ಅಪಾಯಕಾರಿ. ಸದ್ಯ 80% ಮಕ್ಕಳು ಹೆಲ್ಮೆಟ್ ಇಲ್ಲದೆಯೇ ಪ್ರಯಾಣಿಸುತ್ತಿರುವುದು ಕಳವಳ ತಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!
Scroll to Top