ಖ್ಯಾತ ನಟರ ಯಶಸ್ಸಿನ ಹಿಂದಿನ ಶಕ್ತಿ ಜಯಮ್ಮ ವಿಧಿವಶ

(ನ್ಯೂಸ್ಕಡಬ) newskadaba.com,  ಜೂ.16 ಖ್ಯಾತ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ತಾಯಿ ಜಯಮ್ಮ (ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ ಅವರ ಪತ್ನಿ) ಇಂದು ಮುಂಜಾನೆ ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.ಪತಿ ಚಿನ್ನೇಗೌಡರ ಚಿತ್ರ ನಿರ್ಮಾಣ ಹಾಗೂ ಪುತ್ರರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ಯಶಸ್ವಿ ಸಿನಿ ಪಯಣದ ಹಿಂದೆ ಇವರು ದೊಡ್ಡ ಆಧಾರಸ್ತಂಭವಾಗಿದ್ದರು.

ಜಯಮ್ಮ ಅವರ ನಿಧನಕ್ಕೆ ಸ್ಯಾಂಡಲ್‌ವುಡ್ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

Scroll to Top