ಲೀಟರಿಗೆ 87.77 ರೂ. ಗೆ ಏರಿದ ಪೆಟ್ರೋಲ್ ► ದಿನೇ ದಿನೇ ಗಗನಕ್ಕೇರುತ್ತಿರುವ ಪೆಟ್ರೋಲ್, ಡೀಸೆಲ್ ದರ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.08. ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರುತ್ತಿದ್ದು, ಶನಿವಾರದಂದು ಮುಂಬಯಿಯಲ್ಲಿ ಪೆಟ್ರೋಲ್ ಲೀಟರಿಗೆ 87.77
ಹಾಗೂ ಡೀಸೆಲ್ ದರ 76.98 ರೂ. ಗಳಿಗೆ ತಲುಪಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 80.38 ರೂ., ಬೆಂಗಳೂರಿನಲ್ಲಿ 82.94 ರೂ.ಗೆ ಏರಿಕೆಯಾಗಿದೆ. ನವದೆಹಲಿಯಲ್ಲಿ ಪ್ರತೀ ಲೀಟರ್ ಡೀಸೆಲ್ಗೆ 72.51 ರೂ., ಬೆಂಗಳೂರಿನಲ್ಲಿ 74.79 ರೂ. ಗೆ ಏರಿಕೆಯಾಗಿದೆ. ತೈಲ ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ಸರಕಾರವು ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಬೊಬ್ಬಿಡಲು ಆರಂಭಿಸಿವೆ.

Scroll to Top