ಭಾರೀ ಮಳೆ-ಕೇರಳದ ಇಡುಕ್ಕಿಯಲ್ಲಿ ಭೂಕುಸಿತ ಕನಿಷ್ಠ ಓರ್ವ ಮೃತ್ಯು , ಮುಂದುವರಿದ ರಕ್ಷಣಾ ಕಾರ್ಯಾಚರಣೆ



(ನ್ಯೂಸ್ ಕಡಬ) newskadaba.com ಆ. 01. ಭಾರೀ ಮಳೆಗೆ ಕೇರಳದ ಇಡುಕ್ಕಿ ಜಿಲ್ಲೆಯ ವಾಗಮೋನ್ ಎಂಬಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟು ಮತ್ತೋರ್ವ ಅವಶೇಷಗಳಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.







ಮೃತಪಟ್ಟವರನ್ನು ಇಡುಕ್ಕಿಯ ವೈಕೋಮ್ ಮೂಲದ ಪ್ರಭಾಕರನ್ ನಾಯರ್ ಎಂದು ಗುರುತಿಸಲಾಗಿದೆ. ಅವಶೇಷಗಳಡಿಯಿಂದ ಅವರ ಮೃತದೇಹವನ್ನು ಹೊರೆತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






ಪ್ರತ್ಯೇಕ ಘಟನೆಯಲ್ಲಿ, ಅಡೂರ್ಮಲಾ ಎಂಬಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿದ್ದು, ಪರಿಣಾಮ ಸ್ಥಳದಲ್ಲಿ ಮಣ್ಣು ಮತ್ತು ಅವಶೇಷಗಳಡಿಯಲ್ಲಿ ವ್ಯಕ್ತಿಯೋರ್ವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ರಾಜ್ಯದಲ್ಲಿ ಭಾರೀ ಮಳೆಯಿಂದ ಹಲವೆಡೆ ಹಾನಿಯಾಗಿದ್ದು, ಕೊಚ್ಚಿ–ಧನುಷ್ಕೋಡಿ ರಾಷ್ಟ್ರೀಯ ಹೆದ್ದಾರಿಯ ಆದಿಮಲಿಯ ಮಾಚಿಪ್ಲಾವು ಸಮೀಪ ಭೂಕುಸಿತ ಸಂಭವಿಸಿದೆ. ಭೂಕುಸಿತದ ವೇಳೆ ಕಾರು ಹಾಗೂ ಲಾರಿ ಮಣ್ಣಿನಡಿ ಸಿಲುಕಿರುವ ಬಗ್ಗೆ ವರದಿಯಾಗಿದ್ದು, ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

error: Content is protected !!
Scroll to Top