ಕಾಮನ್ವೆಲ್ತ್ 2026 ಜೂಡೋದಲ್ಲಿ ಐತಿಹಾಸಿಕ ಚಿನ್ನ ಸೇರಿದಂತೆ ಒಂದೇ ದಿನ 6 ಪದಕ ಗೆದ್ದ ಭಾರತ



(ನ್ಯೂಸ್ ಕಡಬ) newskadaba.com ಆ. 01. ಕಾಮನ್ವೆಲ್ತ್ ಗೇಮ್ಸ್ 2026ರಲ್ಲಿ ಭಾರತೀಯ ಕ್ರೀಡಾಪಟುಗಳು ಜೂಡೋ, ಅಥ್ಲೆಟಿಕ್ಸ್ ಮತ್ತು ಬಾಕ್ಸಿಂಗ್‌ ವಿಭಾಗಗಳಲ್ಲಿ ಅದ್ಭುತ ಸಾಧನೆ ತೋರಿದ್ದಾರೆ.







ಪುರುಷರ 60 ಕೆಜಿ ವಿಭಾಗದ ಫೈನಲ್‌ ನಲ್ಲಿ ಆಸ್ಟ್ರೇಲಿಯಾದ ಜೋಶುವಾ ಕಟ್ಜ್ ಅವರನ್ನು 10-0 ಅಂತರದಿಂದ ಸೋಲಿಸಿ, ಕಾಮನ್ವೆಲ್ತ್ ಜೂಡೋ ಇತಿಹಾಸದಲ್ಲೇ ಚಿನ್ನ ಗೆದ್ದ ಮೊದಲ ಭಾರತೀಯ ಪುರುಷ ಜೂಡೋ ಪಟು ಎಂಬ ಇತಿಹಾಸ ನಿರ್ಮಿಸಿದರು. ಮಹಿಳೆಯರ 57 ಕೆಜಿ ವಿಭಾಗದ ರೋಮಾಂಚಕ ಫೈನಲ್‌ ನಲ್ಲಿ ಇಂಗ್ಲೆಂಡ್‌ನ ಅಸೆಲ್ಯಾ ಟೋಪ್ರಾಕ್ ವಿರುದ್ಧ ಗೋಲ್ಡನ್ ಸ್ಕೋರ್ ಹಂತದವರೆಗೆ ಹೋರಾಡಿ ಬೆಳ್ಳಿ ಪದಕ ಪಡೆದರು.






 

ಡೆಕಾಥ್ಲಾನ್ ವಿಭಾಗದಲ್ಲಿ 7,976 ಪಾಯಿಂಟ್‌ಗಳೊಂದಿಗೆ ಕಂಚು ಗೆದ್ದು, ಈ ವಿಭಾಗದಲ್ಲಿ ಪದಕ ಪಡೆದ ಮೊದಲ ಭಾರತೀಯ ಎನಿಸಿಕೊಂಡರು. ಜಾವೆಲಿನ್ ಥ್ರೋನಲ್ಲಿ 85.83 ಮೀಟರ್ ಎಸೆದು ಬೆಳ್ಳಿ ಪದಕ ಗಳಿಸಿದರು. ಜಾವೆಲಿನ್ ಥ್ರೋನಲ್ಲಿ 85.41 ಮೀಟರ್ (ವೈಯಕ್ತಿಕ ಅತ್ಯುತ್ತಮ) ಎಸೆದು ಕಂಚಿನ ಪದಕ ಗೆದ್ದರು. (ಶ್ರೀಲಂಕಾದ ರಮೇಶ್ ತರಂಗ 89.75 ಮೀ. ಸಾಧನೆಯೊಂದಿಗೆ ಚಿನ್ನ ಗೆದ್ದರು).

 

ಸೆಮಿಫೈನಲ್ ತಲುಪಿದ್ದ ಎಲ್ಲಾ 10 ಭಾರತೀಯ ಬಾಕ್ಸರ್ ಗಳು ತಮ್ಮ ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿದ್ದು, ಭಾರತಕ್ಕೆ ಕನಿಷ್ಠ 10 ಬೆಳ್ಳಿ ಪದಕಗಳು ಖಚಿತವಾಗಿವೆ.

ಇನ್ನೊಂದೆಡೆ, ಸೆಮಿಫೈನಲ್ ತಲುಪಿದ್ದ ಭಾರತದ ಎಲ್ಲಾ 10 ಬಾಕ್ಸರ್‌ ಗಳು ತಮ್ಮ ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಕನಿಷ್ಠ ಬೆಳ್ಳಿ ಪದಕ ಖಚಿತವಾಗಿದ್ದು, ಚಿನ್ನದ ಪದಕದ ನಿರೀಕ್ಷೆ ಜೀವಂತವಾಗಿದೆ. ದಿನದ ಅಂತ್ಯಕ್ಕೆ 5 ಚಿನ್ನ, 12 ಬೆಳ್ಳಿ, 6 ಕಂಚು ಸಾಧನೆಯೊಂದಿಗೆ ಭಾರತ ಒಟ್ಟು ಪದಕಗಳ ಸಂಖ್ಯೆ 23ಕ್ಕೆ ಏರಿದ್ದು, ಪ್ರಸ್ತುತ ಅಂಕಪಟ್ಟಿಯಲ್ 10ನೇ ಸ್ಥಾನದಲ್ಲಿದೆ.

error: Content is protected !!
Scroll to Top