ಟಿಕೆಟ್ ದೃಢೀಕರಣ ವಿಳಂಬ 3 ಕೋಟಿ ಬಳಕೆದಾರರ ಐಡಿಗಳನ್ನು ನಿಷ್ಕ್ರಿಯಗೊಳಿಸಿದ IRCTC

(ನ್ಯೂಸ್ ಕಡಬ) newskadaba.com ಜೂ. 05. ಇನ್ನುಮುಂದೆ ರೈಲು ಪ್ರಯಾಣಿಕರು ದೃಢೀಕೃತ ಟಿಕೆಟ್ ಕಾಯ್ದಿರಿಸುವಲ್ಲಿ ಎದುರಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಐಆರ್‌ಸಿಟಿಸಿ ಮೂರು ಕೋಟಿ ಸಂಶಯಾಸ್ಪದ ಬಳಕೆದಾರರ ಐಡಿಗಳನ್ನು ನಿಷ್ಕ್ರಿಯಗೊಳಿಸಿರುವ ಕುರಿತು ವರದಿಯಾಗಿದೆ.

ಇದೀಗ 800ಕ್ಕೂ ಅಧಿಕ ಪಾಕಶಾಲೆಗಳ ಮೇಲೆ 2,394 ಏಐ-ಆಧರಿತ ಕ್ಯಾಮೆರಾಗಳು ಕಣ್ಣಾವಲು ಇರಿಸಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮೂಲಕ ರೈಲ್ವೇ ಆಹಾರ ಅನೈರ್ಮಲ್ಯಕ್ಕೆ ಕಾರಣವಾಗುವ ಅಂಶಗಳನ್ನು ಪತ್ತೆ ಮಾಡಬಹುದಾಗಿದೆ. ಅಲ್ಲದೇ ಆಹಾರ ತಯಾರಿಕೆ ಮತ್ತು ವಿತರಣೆಯಲ್ಲಿ ಹೆಡ್‌ಕ್ಯಾಪ್ ಕಡ್ಡಾಯವಾಗಿ ಧರಿಸುವುದು, ಪಾರದರ್ಶಕ ಕೈಗವಸುಗಳ ಬಳಕೆ, ಮಾಪಿಂಗ್, ವೈಪಿಂಗ್, ಇಲಿ/ಅಳಿಲು, ಕೀಟಗಳು ಮತ್ತು ಜಿರಲೆಗಳನ್ನೂ ಕೂಡಾ ಇದು ಪತ್ತೆ ಮಾಡುತ್ತದೆ.

ವರದಿಯ ಪ್ರಕಾರ, ಸಂಶಯಾಸ್ಪದ ಟಿಕೆಟ್ ಬುಕ್ಕಿಂಗ್ ದಂಧೆಯ ವಿರುದ್ಧ ಕ್ರಮ ಕೈಗೊಂಡಿರುವ ಐಆರ್‌ಸಿಟಿಸಿ, 4.2 ಲಕ್ಷ ಸಂಶಯಾಸ್ಪದ ಪಿಎನ್‌ಆರ್‌ಗಳಿಗೆ ಸಂಬಂಧಿಸಿದಂತೆ 501 ದೂರುಗಳನ್ನು ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್‌ ನಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದೆ. ಈ ವರ್ಷ 13,343 ಸಂಶಯಾಸ್ಪದ ಇ-ಮೇಲ್ ಐಡಿಗಳನ್ನು ಬ್ಲಾಕ್ ಮಾಡುವ ಮೂಲಕ ವಂಚನೆ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ವಿವರಿಸಲಾಗಿದೆ.

Scroll to Top