ಜೂ. 5-7ರ ವರೆಗೆ ಕಾಸರಗೋಡು ಸಹಿತ ಕೇರಳದ ಏಳು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌



(ನ್ಯೂಸ್‌ ಕಡಬ) newskadaba.com,  ಜೂ.05: ಕಾಸರಗೋಡು ಸಹಿತ ರಾಜ್ಯದ ಏಳು ಜಿಲ್ಲೆಗಳಲ್ಲಿ ಜೂ.5 ರಿಂದ 7ರ ವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.







ಕಾಸರಗೋಡು, ಕಣ್ಣೂರು, ವಯನಾಡು, ಕಲ್ಲಿಕೋಟೆ, ಮಲಪ್ಪುರಂ, ಪಾಲ್ಘಾಟ್‌ ಮತ್ತು ತೃಶ್ಶೂರು ಜಿಲ್ಲೆಗಳಲ್ಲಿ ಕೇಂದ್ರ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಕೇರಳದಲ್ಲಿ ಜೂ. 9ರ ಮಧ್ಯರಾತ್ರಿಯಿಂದ ಜು. 31ರ ಮಧ್ಯರಾತ್ರಿ ವರೆಗೆ ಯಾಂತ್ರೀಕೃತ ದೋಣಿಗಳು ಹಾಗೂ ಆಳ ಸಮುದ್ರ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ.






ಈ ಹಿನ್ನೆಲೆಯಲ್ಲಿ ಇತರ ರಾಜ್ಯಗಳ ಬೋಟುಗಳು ಜೂ. 9ರ ಒಳಗೆ ಕೇರಳದಿಂದ ತೆರಳಬೇಕು. ನಿಯಮ ಉಲ್ಲಂಘಿಸುವ ದೋಣಿಗಳ ವಿರುದ್ಧ ಕಠಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಎಂ ಕೆ.ವಿ. ಶ್ರುತಿ ತಿಳಿಸಿದ್ದಾರೆ.

error: Content is protected !!
Scroll to Top