ನವದೆಹಲಿ: ಇಂದು 3.2 ತೀವ್ರತೆಯ ಭೂಕಂಪನದ ಅನುಭವ



(ನ್ಯೂಸ್‌ ಕಡಬ) newskadaba.com ಜು. 22, ನವದೆಹಲಿ: ದೆಹಲಿ ಎನ್‌ಸಿಆರ್‌ನಲ್ಲಿ ಇಂದು ಮುಂಜಾನೆ (ಜು.22) ಭೂಕಂಪನದ ಅನುಭವವಾಗಿದೆ. ಯಾವುದೇ ಜೀವಹಾನಿ, ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.







ಭೂಕಂಪನದ ಕೇಂದ್ರಬಿಂದು ಹರಿಯಾಣದ ಫರಿದಾಬಾದ್ ಆಗಿದೆ. ರಿಕ್ಟರ್ ಮಾಪಕದಲ್ಲಿ ಬೆಳಿಗ್ಗೆ 6 ಗಂಟೆಗೆ, 3.2 ತೀವ್ರತೆಯ ಕಂಪನ ದಾಖಲಾಗಿದೆ. ಭೂಮಿಯ ಮೇಲ್ಮೈಯಿಂದ 5 ಕಿ.ಮೀ ಕೆಳಗೆ ಈ ಕಂಪನವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.






error: Content is protected !!
Scroll to Top