ಪಡಿತರ ದಾರರ ಗಮನಕ್ಕೆ: ರಾಜ್ಯಾದ್ಯಂತ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಪಡಿತರ ಅಂಗಡಿ ಓಪನ್‌!

(ನ್ಯೂಸ್‌ ಕಡಬ) newskadaba.com,  ಜು. 24: ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ನ್ಯಾಯಬೆಲೆ (ಪಡಿತರ) ಅಂಗಡಿಗಳು ಪ್ರತಿದಿನ ಬೆಳಿಗ್ಗೆ 6:00 ರಿಂದ ರಾತ್ರಿ 10:00 ಗಂಟೆಯವರೆಗೆ ಕಡ್ಡಾಯವಾಗಿ ತೆರೆದಿರಬೇಕು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶಿಸಿದೆ.

ದಾಸ್ತಾನು ತಲುಪಿದ್ದರೂ ಫಲಾನುಭವಿಗಳಿಗೆ ಪಡಿತರ ಸಿಗಲು ವಿಳಂಬವಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಜುಲೈ ತಿಂಗಳ ಪಡಿತರ ವಿತರಣೆಯನ್ನು ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ.ಈ ನಿರ್ದೇಶನವನ್ನು ಮಳಿಗೆಗಳ ವಿತರಕರು ಉಲ್ಲಂಘಿಸಿದರೆ ಅಥವಾ ನಿಗದಿತ ಸಮಯದಲ್ಲಿ ಅಂಗಡಿ ತೆರೆಯದಿದ್ದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಜಂಟಿ ಹಾಗೂ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ.

ಸಾರ್ವಜನಿಕರಿಗೆ ಅನಾನುಕೂಲ ತಪ್ಪಿಸಿ, ನಿಗದಿತ ಅವಧಿಯೊಳಗೆ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಪಡಿತರ ತಲುಪಿಸುವುದು.

Scroll to Top