2ನೇ ಮತ್ತು 4ನೇ ಶನಿವಾರ ರಜೆ ಇಲ್ಲ- ಎಲ್ಲಾ ದಿನವೂ ಕಛೇರಿಗಳು ಕಾರ್ಯ ನಿರ್ವಹಿಸಬೇಕು ಸುಪ್ರೀಂ ಕೋರ್ಟ್ ಆದೇಶ



(ನ್ಯೂಸ್ ಕಡಬ) newsksdaba.com ಮಂಗಳೂರು, ಜೂ. 19. ಎರಡು ಮತ್ತು ನಾಲ್ಕನೇ ಶನಿವಾರದ ರಜೆಯ ಕುರಿತಾಗಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, 2025ರ ಪ್ರಕಾರ ಸುಪ್ರೀಂ ಕೋರ್ಟ್ ನ ನೋಂದಾವಣೆ ಮತ್ತು ಕಚೇರಿಗಳು ಕೆಲಸದ ದಿನಗಳ ಪಟ್ಟಿಗೆ ಮರಳಿ ಸೇರಿಸಿದೆ.







ಸುಪ್ರೀಂ ಕೋರ್ಟ್ ನಿಯಮಗಳ ಆದೇಶ II, ನಿಯಮಗಳು 1 ರಿಂದ 3 ರ ಅಡಿಯಲ್ಲಿದ್ದು, ಕೆಲಸದ ದಿನಗಳು ಮತ್ತು ಕಚೇರಿ ಸಮಯಗಳಿಗೆ ಪರಿಷ್ಕೃತ ಚೌಕಟ್ಟನ್ನು ಪರಿಚಯಿಸಿವೆ. ಹೊಸ ಅಧಿಸೂಚನೆಯ ಪ್ರಕಾರ, ಸುಪ್ರೀಂ ಕೋರ್ಟ್‌ನ ಕಚೇರಿಗಳು ಈಗ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲಿವೆ.






ಹೀಗಾಗಿ ನ್ಯಾಯಾಲಯದ ಕಚೇರಿಯು ಇನ್ನು ಸಾಂಪ್ರದಾಯಿಕವಾಗಿ ರಜೆ ಇದ್ದ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸೇರಿದಂತೆ ಎಲ್ಲಾ ಶನಿವಾರ ತೆರೆದಿರುತ್ತದೆ. ಗೊತ್ತುಪಡಿಸಿದ ರಜಾದಿನಗಳು ಮತ್ತು ಭಾಗಶಃ ಕೆಲಸದ ದಿನಗಳನ್ನು ಹೊರತುಪಡಿಸಿ ಕಚೇರಿಗಳು ಎಲ್ಲ ದಿನ ಕಾರ್ಯನಿರ್ವಹಿಸಬೇಕು. ಶನಿವಾರ ಕಚೇರಿ ಸಮಯ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಇರುತ್ತದೆ ಮತ್ತು ತುರ್ತು ವಿಷಯಗಳನ್ನು ಮಧ್ಯಾಹ್ನ 12 ಗಂಟೆಯ ಮೊದಲು ಸಲ್ಲಿಸಬೇಕು ಎಂದು ಕೋರ್ಟ್ ಆದೇಶಿಸಿದೆ.

error: Content is protected !!
Scroll to Top