3 ವರ್ಷದ ಮಗುವಿನ ಮೇಲೆ ಹರಿದ ಕಾರು.!➤ಪ್ರಕರಣ ದಾಖಲು



(ನ್ಯೂಸ್ ಕಡಬ)newskadaba.com ಹೈದರಾಬಾದ್,ಮೇ.25  ಪಾರ್ಕಿಂಗ್‌ ಏರಿಯಾದಲ್ಲಿ ಮಲಗಿದ್ದ 3 ವರ್ಷದ ಮಗುವಿನ ಮೇಲೆ ಎಸ್ ಯುವಿ ಕಾರು ಹರಿದು ಮಗು ಮೃತಪಟ್ಟಿರುವ ಘಟನೆ ಹೈದರಬಾದ್‌ ನಲ್ಲಿ ನಡೆದಿರುವುದು ವರದಿಯಾಗಿದೆ.







ಕಲಬುರಗಿಯ ಶಹಬಾದ್‌ ಮೂಲದ ಮಹಿಳೆಯಾಗಿರುವ ಕವಿತಾ ತನ್ನ ಎರಡು ಮಕ್ಕಳೊಂದಿಗೆ ಕೆಲಸ ಹುಡುಕಿಕೊಂಡು ಹೈದರಬಾದ್‌ ಗೆ ಬಂದಿದ್ದಾರೆ.ಪಾರ್ಕಿಂಗ್‌ ಏರಿಯಾದಲ್ಲಿ ಮಗುವನ್ನು ಮಲಗಿಸಿದ್ದ ವೇಳೆ ಎಸ್ ಯುವಿ ಕಾರು ಪಾರ್ಕ್‌ ಮಾಡುವ ನಿಟ್ಟಿನಲ್ಲಿ ಬಂದು ಮಲಗಿದ್ದ ಮಗುವಿನ ಮೇಲೆ ಹರಿದು ಮತ್ತೆ ಹಿಂದಕ್ಕೆ ಹೋಗಿದೆ.






ತಲೆಗೆ ತೀವ್ರತರದ ಏಟಾಗಿ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಘಟನೆ ಸಂಬಂಧ ಮಗುವಿನ ತಾಯಿ ಕವಿತಾ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

 

 

error: Content is protected !!
Scroll to Top