
(ನ್ಯೂಸ್ ಕಡಬ) newskadaba.com, ಅ .30 . ನಟ ಧನ್ವೀರ್ ಗೌಡ ವಿರುದ್ಧ ದಾಖಲಾಗಿದ್ದ ದೂರುಗಳ ಪೈಕಿ ರಾಜರಾಜೇಶ್ವರಿ ನಗರ ಮತ್ತು ಬಸವೇಶ್ವರ ನಗರ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಧನ್ವೀರ್ ಅವರಿಗೆ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.ದರ್ಶನ್ ಅವರ ಆಪ್ತ ಸಹಾಯಕ ನಾಗರಾಜು ಹಾಗೂ ಅವರ ಸ್ನೇಹಿತ ಭೋಜರಾಜು ನೀಡಿದ ದೂರಿನ ಮೇರೆಗೆ, ಕೊಲೆ ಬೆದರಿಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಬಸವೇಶ್ವರ ನಗರ ಠಾಣೆಯಲ್ಲಿ ಬಿಎನ್ಎಸ್ (BNS) ಸೆಕ್ಷನ್ 351(2) ಮತ್ತು 352ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲೂ ಹಣ ಹಾಗೂ ಕಾರು ವಿಚಾರವಾಗಿ ಮತ್ತೊಂದು ದೂರು ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆಡಿಯೋಗಳು ಹಾಗೂ 10 ಕೋಟಿ ರೂ.ಗೆ ಸಂಬಂಧಿಸಿದ ವಿಚಾರಗಳು ತನಿಖೆಯ ಹಂತದಲ್ಲಿವೆ.




