
(ನ್ಯೂಸ್ ಕಡಬ) newskadaba.com, ಅ .30 . ರಾಜ್ಯ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ! ಕರ್ನಾಟಕದ 33 ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ 5,431 ಪ್ರಥಮ ದರ್ಜೆ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಪ್ರಕಟಿಸಿದೆ.
ಅಕ್ಟೋಬರ್ 30ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ನವೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ನವೆಂಬರ್ 26ರೊಳಗೆ ಅರ್ಜಿ ಶುಲ್ಕ ಪಾವತಿಸಬೇಕು.
ಹುದ್ದೆಗಳ ವಿವರ FDA: 2,726 ಹುದ್ದೆಗಳು, SDA: 2,705 ಹುದ್ದೆಗಳು, ಒಟ್ಟು: 5,431 ಹುದ್ದೆಗಳು
ಅರ್ಜಿ ಆರಂಭವಾದ ದಿನಾಂಕ ಅಕ್ಟೋಬರ್ 30, 2026. ಹಾಗೂ ಅರ್ಜಿ ಹಾಕುವ ಕೊನೆಯ ದಿನ ನವೆಂಬರ್ 25, 2026 , ಶುಲ್ಕ ಪಾವತಿಗೆ ಕೊನೆಯ ದಿನ ನವೆಂಬರ್ 26, 2026.. ಪರೀಕ್ಷೆ ಜನವರಿ 8, 9, 10, 16 ಮತ್ತು 17, 2027.ಆಸಕ್ತ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.




