ಕಲ್ಲು ಕ್ವಾರಿಯಲ್ಲಿ ಸ್ಪೋಟ ಸಂಭವಿಸಿ, ಕೂಲಿ ಕಾರ್ಮಿಕ ಮೃತ್ಯು.!

(ನ್ಯೂಸ್ ಕಡಬ)newskadaba.com ಕೋಲಾರ,ಮೇ.25  ಕಲ್ಲು ಕ್ವಾರಿಯಲ್ಲಿ ಸ್ಪೋಟ ಸಂಭವಿಸಿ ಕೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ಕೋಲಾರ ತಾಲೂಕಿನ ಕೆ.ಬಿ.ಹೊಸಹಳ್ಳಿ ಬಳಿ ನಡೆದಿದೆ.ಕೆ.ಬಿ.ಹೊಸಹಳ್ಳಿ ಬಳಿಯ ಜೈರಾಮರೆಡ್ಡಿ ಎಂಬುವರಿಗೆ ಸೇರಿದ ಕಲ್ಲಿನ ಕ್ವಾರಿಯಲ್ಲಿ ಸ್ಪೋಟ ಸಂಭವಿಸಿದ್ದು, ಯಾದಗಿರಿ ಮೂಲದ ಕಾರ್ಮಿಕ ಸೋಮಶೇಖರ್ ಮೃತಪಟ್ಟಿದ್ದಾರೆ.

ಕಲ್ಲು ಕ್ವಾರಿಯಲ್ಲಿ ಸ್ಪೋಟದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಕೂಲಿ ಕಾರ್ಮಿಕ ಸೋಮಶೇಖರ್ ನನ್ನು ಹೊಸಕೋಟೆಯ ಎಂಬಿಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ವೇಮಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

Scroll to Top