ಖ್ಯಾತ ಖಳನಾಯಕನಿಗೆ ವಿಷವುಣಿಸಿದ ಸಹೋದರ ➤ ಕಣ್ಣೀರಿಟ್ಟ ಪೊನ್ನಂಬಲಂ

(ನ್ಯೂಸ್ ಕಡಬ) newskadaba.com. ಚೆನ್ನೈ, ಮಾ 14. ಖಳನಾಯಕ ಪಾತ್ರದಲ್ಲಿ ಅಮೋಘ ಅಭಿನಯದ ಮೂಲಕ ತುಂಬಾ ಪ್ರಸಿದ್ಧಿ ಪಡೆದಿರುವ ಖಳನಟ ಪೊನ್ನಂಬಲಂ ಯೂಟ್ಯೂಬ್​ ಚಾನೆಲ್​ ಸಂದರ್ಶನವೊಂದರಲ್ಲಿ ತನ್ನ ಬದುಕಿನಲ್ಲಿ ಸಹೋದರನಿಂದಲೇ ನಡೆದ ದ್ರೋಹವನ್ನು ಬಿಚ್ಚಿಟ್ಟಿದ್ದಾರೆ.

ಇತ್ತೀಚೆಗಷ್ಟೇ ಪೊನ್ನಂಬಲಂ ಕಿಡ್ನಿ ಕಸಿ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ತನ್ನ ಸಹೋದರ ತನಗೆ ವಿಷ ಹಾಕಲು ಯತ್ನಿಸಿದರು    ಎಂದು ಆರೋಪ ಮಾಡಿದ್ದಾರೆ. ನನ್ನ ಕುಡಿತ ಚಟದಿಂದ ನನ್ನ ಕಿಡ್ನಿಗಳು ಹಾನಿಯಾಗಿಲ್ಲ. ನನ್ನ ತಂದೆಗೆ ನಾಲ್ಕು ಹೆಂಡತಿಯರು. ತಂದೆಯ ಮೂರನೇ ಹೆಂಡತಿಯ ಮಗ ಹಾಗೂ ನನ್ನ ಮಲ ಸಹೋದರ ನನ್ನ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ನಾನು ಅವನನ್ನು ತುಂಬಾ ನಂಬಿದ್ದೆ. ಆದರೂ, ಒಂದು ದಿನ ಬಿಯರ್‌ನಲ್ಲಿ ಸ್ಲೋ ಪಾಯಿಸನ್​ ಅನ್ನು ಬೆರೆಸಿ ಕುಡಿಸಿದರು. ಇದು ನನ್ನ ಮೂತ್ರಪಿಂಡದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು ಎಂದು ಹೇಳಿದ್ದಾರೆ.

ಸುಮಾರು 1500 ಸಿನಿಮಾಗಳಲ್ಲಿ ಪೆಟ್ಟು ತಿಂದು ಗಳಿಸಿದೆಲ್ಲ ನನ್ನ ಕುಟುಂಬಕ್ಕಾಗಿ. ಆದರೆ, ನನ್ನ ಸಹೋದರ ನನಗೆ ಈ ರೀತಿ ಮಾಡಿದ್ದಾನೆ ಎಂದು ತಿಳಿದಾಗ ನನಗೆ ತುಂಬಾ ನೋವಾಯಿತು ಎಂದು ಹೇಳಿದರು.

Scroll to Top