ಪರೀಕ್ಷೆಗೆ ತೆರೆಳುವಾಗ ಅಪಘಾತ ➤ ಆಸ್ಪತ್ರೆಯ ಬೆಡ್‌‌ನಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿ…!

(ನ್ಯೂಸ್ ಕಡಬ)newskadaba.com ಕೊಲ್ಕತ್ತಾ, ಮಾ.16. ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಪರೀಕ್ಷೆ ಬರೆಯಲು ಹೋಗುವಾಗ ಅಪಘಾತವಾಗಿ ಯುವಕನೊಬ್ಬ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೂ, ಆಸ್ಪತ್ರೆಯ ಬೆಡ್‌ ನಲ್ಲೇ ಕೂತು ಪರೀಕ್ಷೆ ಬರೆದಿರುವ ಘಟನೆ ನಡೆದಿದೆ.

ಅಲಿನಗರ ಯಾಸಿನ್ ಮಲಿಕ್ ಪ್ರೌಢಶಾಲೆಯ ಸಂದೀಪ್ ಮಾಝಿ(15 ) ಪರೀಕ್ಷೆ ಬರೆಯಲು ತನ್ನ ತಂದೆಯ ಬೈಕ್‌ ನಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದು, ಈ ವೇಳೆ ಸಂದೀಪ್‌ ಅವರ ಬೈಕ್‌ ಗೆ ಮತ್ತೊಂದು ಬೈಕ್‌ ವೇಗವಾಗಿ ಬಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸಂದೀಪ್‌ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

 

Scroll to Top