➤ಹೈದರಾಬಾದ್‌ ಬೀದಿ ನಾಯಿ ದಾಳಿಗೆ 4 ವರ್ಷದ ಬಾಲಕ ಮೃತ್ಯು..!

(ನ್ಯೂಸ್ ಕಡಬ) newskadaba.com. ಹೈದರಾಬಾದ್‌. ಫೆ.21.  ನಾಲ್ಕು ವರ್ಷದ ಬಾಲಕನನ್ನು ಬೀದಿ ನಾಯಿಗಳು ಕೊಂದ ಘಟನೆ ಹೈದರಾಬಾದ್‌ ನಲ್ಲಿ ನಡೆದಿದೆ.  ಮಗುವಿನ ತಂದೆ ಕಾವಲುಗಾರನಾಗಿ ಕೆಲಸ ಮಾಡುತ್ತಾರೆ.

ನಾಯಿಗಳು ಕಚ್ಚಿದ ಏಟಿಗೆ ಬಾಲಕನ ಹೊಟ್ಟೆಗೆ ತೀವ್ರತರ ಗಾಯಗಳಾಗಿದ್ದು, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಗು ಕೊನೆಯುಸಿರೆಳೆದಿದ್ದಾನೆ ಈ ಘಟನೆ ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಹುಡುಗ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮೂರು ನಾಯಿಗಳು ಓಡಿ ಬಂದು ಅವನ ಮೇಲೆ ದಾಳಿ ಮಾಡಿ ಅವನನ್ನು ಕಚ್ಚಿ ಕೊಂದಿವೆ ಎಂದು ತಿಳಿದು ಬಂದಿದೆ.

Scroll to Top