ಪುತ್ತೂರು: ಬೈಕ್ ಮೇಲೆ ಉರುಳಿ ಬಿದ್ದ ಬೊಲೆರೋ  ➤ ಸವಾರ ಮೃತ್ಯು

(ನ್ಯೂಸ್ ಕಡಬ)newskadaba.com ಪುತ್ತೂರು, ಫೆ.21. ಬಜತ್ತೂರು ಗ್ರಾಮದ ಕೆಮ್ಮಾರ ಎಂಬಲ್ಲಿ ದ್ವಿಚಕ್ರ ವಾಹನದ ಮೇಲೆ ಬೊಲೆರೋ ಪಲ್ಟಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಫೆ.20ರಂದು ನಡೆದಿದೆ.

ಮೃತರನ್ನು ಕೊಯಿಲ ಗ್ರಾಮದ ಕಡೆಂಬ್ಯಾಲು ನಿವಾಸಿ ಕೊರಗಪ್ಪ ಗೌಡ (58) ಎಂದು ಗುರುತಿಸಲಾಗಿದೆ.\

ಕೃಷ್ಣಪ್ಪ ನಾಯ್ಕ ಚಲಾಯಿಸುತ್ತಿದ್ದ ಬೊಲೆರೋ ಪಿಕಪ್ ಕಡಬದಿಂದ ಬರುತ್ತಿದ್ದು, ಓಡ್ಲಾ ಎಂಬಲ್ಲಿ ವಾಹನ ಚಲಾಯಿಸಿ ದಿಢೀರ್ ಬ್ರೇಕ್ ಹಾಕಿದ್ದಾನೆ. ಪರಿಣಾಮವಾಗಿ ಬೊಲೆರೋ ಪಲ್ಟಿಯಾಗಿ ಕೊರಗಪ್ಪ ಅವರು ಚಲಾಯಿಸುತ್ತಿದ್ದ ಬೈಕ್ ಮೇಲೆ ಬಿದ್ದಿದೆ.

 

 

 

Scroll to Top