ಭಾರತ್ ಪೇ ಸಿಇಒ ಸುಹೇಲ್ ಸಮೀರ್ ಹುದ್ದೆಗೆ ರಾಜಿನಾಮೆ…!!!         

(ನ್ಯೂಸ್ ಕಡಬ) newskadaba.com ನವದೆಹಲಿ, ಜ.03.  ಮಾಜಿ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರೊಂದಿಗೆ ಮನಸ್ತಾಪ ಹೊಂದಿದ್ದ ಭಾರತ್‌ಪೇ ಸಿಇಒ ಸುಹೇಲ್ ಸಮೀರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸುಹೈಲ್ ಸಮೀರ್ ಅವರು ಭಾರತ್ ಪೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಿಂದ ಕಾರ್ಯತಂತ್ರದ ಸಲಹೆಗಾರರಾಗಿ ಜನವರಿ 7, 2023 ರಿಂದ ಜಾರಿಗೆ ಬರುವಂತೆ ಕರ್ತವ್ಯ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಕಂಪನಿಯ ಮಧ್ಯಂತರ ಸಿಇಒ ಆಗಿ ನೇಮಕಗೊಂಡಿರುವ ಪ್ರಸ್ತುತ CFO, ನಳಿನ್ ನೇಗಿಯವರ ಹಾದಿಯನ್ನು ಸುಗಮಗೊಳಿಸುತ್ತದೆ ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ ಎಂದು ವರದಿಯಾಗಿದೆ.

 

 

Scroll to Top