ಈಜು ಬಾರದೆ ಮೂವರು ಯುವಕರು ನೀರುಪಾಲು

 (ನ್ಯೂಸ್ ಕಡಬ) newskadaba.com ರಾಣೆಬೆನ್ನೂರು, ಜ.03. ತುಂಗಾಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲಾದ ಘಟನೆ ಹಾವೇರಿ ಜಿಲ್ಲಾಯ ರಾಣೆಬೆನ್ನೂರು ತಾಲೂಕಿನ ಮುದೇನೂರು ಗ್ರಾಮದ ಬಳಿ ವರದಿಯಾಗಿದೆ.

ಮೃತಪಟ್ಟ ಯುವಕರನ್ನು ನವೀನ್ ಕುರಗುಂದ (20), ವಿಕಾಸ್ ಪಾಟೀಲ್ (20), ಹಾಗೂ ನೆಪಾಳ ಪ್ರೇಮ್ ಬೋರಾ (25) ಎಂದು ಗುರುತಿಸಲಾಗಿದೆ.

ಈ ಯುವಕರು ಈಜು ಬಾರದೆ ನೀರುಪಾಲಾಗಿದ್ದಾರೆನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಬಂದು ನದಿಯಲ್ಲಿ ಶೋಧ ಕಾರ್ಯ ನಡೆಸಿ ವಿಕಾಸ ಎಂಬವರ ಮೃತದೇಹ ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.

Scroll to Top