ಅಕ್ಟೋಬರ್ 15ರಿಂದ ನೂತನ UPI ಶುಲ್ಕ ಜಾರಿ: ಪೆಟ್ರೋಲ್ ಬ್ಯಾಂಕ್‌ಗಳಲ್ಲಿ ಯುಪಿಐ ಬಂದ್ ಮಾಡುವ ಎಚ್ಚರಿಕೆ

(ನ್ಯೂಸ್‌ ಕಡಬ) newskadaba.com, ಸೆ. 19 . ಅಕ್ಟೋಬರ್ 15ರಿಂದ ಜಾರಿಗೆ ಬರಲಿರುವ ಹೊಸ ಯುಪಿಐ ವಹಿವಾಟು ಶುಲ್ಕ ನಿಯಮದ ವಿರುದ್ಧ ಪೆಟ್ರೋಲ್ ಪಂಪ್ ಡೀಲರ್‌ಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.₹2,000ಕ್ಕಿಂತ ಹೆಚ್ಚಿನ ಸಾಮಾನ್ಯ ಯುಪಿಐ ವಹಿವಾಟುಗಳಿಗೆ ಶೇ. 0.4ರಷ್ಟು ಹಾಗೂ ಇಂಧನ ಖರೀದಿಗೆ ಪ್ರತಿ ವಹಿವಾಟಿಗೆ ₹5 ನಿಗದಿತ ಶುಲ್ಕ ನಿಗದಿಪಡಿಸಲಾಗಿದೆ.

₹5 ಶುಲ್ಕಕ್ಕೆ ಶೇ. 18ರಷ್ಟು GST ಸೇರಿದಂತೆ ಪ್ರತಿ ವಹಿವಾಟಿಗೆ ಡೀಲರ್‌ಗಳಿಗೆ ₹5.90 ವೆಚ್ಚವಾಗಲಿದೆ. ಈ ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡುವಂತಿಲ್ಲ, ಬದಲಿಗೆ ವ್ಯಾಪಾರಿಗಳೇ ಭರಿಸಬೇಕಿದೆ.

ತಮಗೆ ನಿಗದಿತ ಕಮಿಷನ್ ಮಾತ್ರ ಸಿಗುವುದರಿಂದ ಈ ವೆಚ್ಚ ಭರಿಸಲು ಸಾಧ್ಯವಿಲ್ಲವೆಂದು ಮಧ್ಯಪ್ರದೇಶದ ಸುಮಾರು 4,700 ಪೆಟ್ರೋಲ್ ಪಂಪ್‌ಗಳಲ್ಲಿ ₹2,000ಕ್ಕೂ ಹೆಚ್ಚಿನ ಬಿಲ್‌ಗಳಿಗೆ ಯುಪಿಐ ಪಾವತಿ ನಿರಾಕರಿಸಿ, ನಗದು ನೀಡುವಂತೆ ಒತ್ತಾಯಿಸಲು ಡೀಲರ್‌ಗಳ ಸಂಘ ನಿರ್ಧರಿಸಿದೆ.

ಮುಂಬೈ ಸೇರಿದಂತೆ ದೇಶದ ವಿವಿಧ ಭಾಗಗಳ ಡೀಲರ್‌ಗಳು ಡಿಜಿಟಲ್ ಪಾವತಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಇಂಧನ ವಹಿವಾಟುಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಸರ್ಕಾರ ಶುಲ್ಕ ವಿನಾಯಿತಿ ನೀಡದಿದ್ದರೆ ಮುಂಬರುವ ದಿನಗಳಲ್ಲಿ ವಾಣಿಜ್ಯ ವಾಹನ ಚಾಲಕರು ಹಾಗೂ ದೊಡ್ಡ ಮೊತ್ತದ ಇಂಧನ ಖರೀದಿಸುವ ಗ್ರಾಹಕರು ನಗದು ಪಾವತಿಯನ್ನೇ ನೆಚ್ಚಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

Scroll to Top