ಖ್ಯಾತ ಯೂಟ್ಯೂಬರ್ ಲೀನಾ ನಾಗವಂಶಿ ನೇಣಿಗೆ ಶರಣು…?



(ನ್ಯೂಸ್ ಕಡಬ) newskadaba.com ಛತ್ತೀಸ್ ಗಡ, ಡಿ. 28. ಖ್ಯಾತ ಯೂಟ್ಯೂಬರ್ ಓರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತ್ತೀಸ್ ಗಡದ ಚಕ್ರಧರ್ ನಗರದಲ್ಲಿ ನಡೆದಿದೆ.







ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಬಿ.ಕಾಂ ವಿದ್ಯಾರ್ಥಿನಿ 22 ವರ್ಷದ ಲೀನಾ ನಾಗವಂಶಿ ಎಂದು ಗುರುತಿಸಲಾಗಿದೆ. ಯೂಟ್ಯೂಬ್‌, ಫೇಸ್‌ ಬುಕ್‌ ಹಾಗೂ ಇನ್ಸ್ಟಾಗ್ರಾಮ್‌ ನಲ್ಲಿ ತನ್ನ ರೀಲ್ಸ್‌ ಹಾಗೂ ಶಾರ್ಟ್ಸ್‌ ವಿಡಿಯೋಗಳಿಂದ 10 ಸಾವಿರ ಫೋಲೋವರ್ಸ್ ಗಳನ್ನು ಹೊಂದಿದ್ದ ಈಕೆ ಕ್ರಿಸ್ ಮಸ್ ಬಳಿಕ ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿರುವುದಾಗಿ ವರದಿ ತಿಳಿಸಿದೆ. ಈ ಬಗ್ಗೆ ದೂರು ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.






error: Content is protected !!
Scroll to Top